ಕುಂದಾಪುರ,ಸೆ,13: ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರಿಗಿರುವ ಕಾಂಚನ ಕಾಂಪ್ಲೆಕ್ಸ್ ನಲ್ಲಿ ಸಮೃದ್ಧ ಜೀವನ ಫಂಡ್ಸ್ ಇಂಡಿಯಾ ಲಿಮಿಟೆಡ್, ಸಮೃದ್ಧ ಜೀವನ ಮಲ್ಟಿ ಸ್ಟೇಟ್-ಮಲ್ಟಿ ಪರ್ಪಸ್ ಕೋ ಅಪ್, ಸೊಸೈಟಿ ಲಿ ಹಾಗೂ ಪ್ರಾಸ್ಪೆರಿಟಿ ಆಗ್ರೋ ಇಂಡಿಯಾ ಸಂಸ್ಥೆಯು ಹಣ ದ್ವಿಗುಣಗೊಳಿಸುವುದಾಗಿ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ದೂರುಗಳು ಕೇಳಿ ಬಂದಿವೆ.
ದೇವಲಕುಂದ ನಿವಾಸಿ ಕಾರ್ಮಿನ್ ಲೂಯಿಸ್ ದೂರು ನೀಡಿದ್ದು , ತನ್ನಿಂದ 3.81 ಲಕ್ಷ ರೂ ಹಾಗೂ ಇತರೆ ಗ್ರಾಹಕರಿಂದ 64.43 ಲಕ್ಷ ರೂ ಸೇರಿದಂತೆ ಒಟ್ಟಾರೆ 68.24 ಲಕ್ಷ ರೂ ಪಡೆದು ಪರಾರಿಯಾಗಿರುವುದಾಗಿ ಮಹೇಶ್ ಕಿಸಾನ್ ಮೊಂತೇವರ್, ಪ್ರಸಾದ್, ವೈಶಾಲಿ ಮೊಂತೇವಾರ್ ವಿರುದ್ಧ ದೂರು ನೀಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment