ಕಾರ್ಕಳ,ಸೆ 17; ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2019-20 ನೇ ಸಾಲಿನ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಕುಮಾರಿ ಶ್ರೀಲಕ್ಷ್ಮಿ ಪ್ರಮೋದ್ ನಾಯಕ್ ಆಯ್ಕೆಯಾಗಿರುತ್ತಾರೆ.
ಅಸಾಧಾರಣ ಸಾಧನೆ ಮಾಡಿರುವ ಮಕ್ಕಳಿಗೆ ನೀಡುವ ಈ ಪ್ರಶಸ್ತಿಯನ್ನು ಇವರು "ತಾರ್ಕಿಕ ಸಾಧನೆಗಳ" ವಿಭಾಗದಿಂದ ಪಡೆದಿರುತ್ತಾರೆ. ಸದರಿ ಪ್ರಶಸ್ತಿಯು ರೂ. 10000/- ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಸ್ತುತ ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಇವರು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 623 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿರುತ್ತಾರೆ. ಬಹುಮುಖ ಪ್ರತಿಭೆಯಾಗಿರುವ ಇವರು ಸಂಗೀತ, ಭರತನಾಟ್ಯ, ಚೆಸ್, ವಿಜ್ಞಾನ ಮಾದರಿ ತಯಾರಿ, ಭಾಷಣ, ಪ್ರಬಂಧ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಸಾಕಷ್ಟು ಬಹುಮಾನಗಳನ್ನು ಗಳಿಸಿರುತ್ತಾರೆ. ಈಕೆ ಕಾರ್ಕಳದ ಉಪನ್ಯಾಸಕ ಶ್ರೀ ಪ್ರಮೋದ್ ನಾಯಕ್ ಹಾಗೂ ಶ್ರೀಮತಿ ಜಯಶ್ರೀಯವರ ಸುಪುತ್ರಿ.
Post a comment