ಹೋಟೆಲ್ ಸೂಪರ್ ವೈಸರ್ ಮೇಲೆ ಹಲ್ಲೆ: ಬಂಧನ-Times Of Karkala
ಉಡುಪಿ, ಸ 1 : ಮಣಿಪಾಲದ ಹೋಟೆಲ್ ಒಂದರ ಸೂಪರ್ ವೈಸರ್ ಆಗಿದ್ದ ಅವಿನಾಶ್ ಪೈ ಎಂಬುವವರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಭಾನುವಾರ ತಡ ರಾತ್ರಿ ವರದಿಯಾಗಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಹೋಟೆಲಿನ ಕಾರ್ ಪಾರ್ಕಿಂಗ್ ಬಳಿ ಯುವಕರ ತಂಡವೊಂದು ನಿಂತಿದೆ ಎಂದು ಅವಿನಾಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಂಡ ಹಲ್ಲೆಗೆ ಮುಂದಾಗಿತ್ತು. ಆರೋಪಿಗಳಾದ ಮಹಾನ್ ರಾವ್ , ಅಕ್ಷಯ್ ವಿ ಕೆ, ಪವನ್ ರಜೆಫ್, ಅಮಿತ್, ಪರ್ಕಳದ ಮಾವಿಲ್, ರಕ್ಷಿತ್, ಪ್ರಕಾಶ್ ಅವರನ್ನು ಒಳಗೊಂಡ ತಂಡವು ಹಲ್ಲೆ ನಡೆಸಿತ್ತು ಎನ್ನಲಾಗಿದೆ.
ಆರೋಪಿಗಳು ಅವಿನಾಶ್ ಪೈ ಅವರ ಕಲರ್ ಹಿಡಿದೆಳೆದು ಕಾರು ಪಾರ್ಕಿಂಗ್ ಸ್ಥಳಕ್ಕೆ ಕರೆದೊಯ್ದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದರು ಎನ್ನಲಾಗಿದೆ. ನಂತರ ಕುತ್ತಿಗೆ ಒತ್ತಿ ಹಿಡಿದು ಕೈ ಮತ್ತು ಕೋಲುಗಳಿಂದ ತಲೆಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ನಂತರ ಬಿಳಿ ಬಣ್ಣದ ರಿಡ್ಜ್ ಕಾರು ಹಾಗು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment