ಮುಡಾರು:ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮ-Times of karkala

ಮುಡಾರು:ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮ-Times of karkala 

ಮುಡಾರು ಸೆ.04:ಬಜಗೋಳಿ ಭಾಗದ ಜನತೆಯ ಬಹುಬೇಡಿಕೆಯಾಗಿದ್ದ ಬಜಗೋಳಿಯ ಎರಡು ರಿಕ್ಷಾ ನಿಲ್ದಾಣ ಹಾಗೂ ಮುಡಾರು ಗ್ರಾಮದ ಎರಡು ಕಾಂಕ್ರೀಟ್ ರಸ್ತೆಯ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು.

ಈ ಸಂಧರ್ಭ ಮಾತನಾಡಿದ ಶಾಸಕ ವಿ. ಸುನೀಲ್ ಕುಮಾರ್ "ಪ್ರತಿಯೊಬ್ಬ ಗ್ರಾಮ ಪಂಚಾಯತ್ ಸದಸ್ಯರೂ  ಕ್ರಿಯಾ ಶೀಲರಾಗಿ ಕೆಲಸ ಮಾಡಿದ್ದಲ್ಲಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸಬಹುದು" ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮತಕ್ಷೇತ್ರ  2ನ್ನು ಮಾದರಿ ವಾರ್ಡ್ ನ್ನಾಗಿ ಮಾಡಲು ಅನುದಾನ ಒದಗಿಸಿದ ಶಾಸಕರಾದ ಸುನೀಲ್ ಕುಮಾರ್ ಹಾಗೂ  ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್, ಶಂಕರ್ ಶೆಟ್ಟಿ ಯವರನ್ನು ವಾರ್ಡ್ ನ ಜನತೆ ಸನ್ಮಾನಿಸಿದರು.

ಮಹಾವೀರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ಜಿಲ್ಲಾ ಪಂಚಾಯತ್ ಸದಸ್ಯ ಉದಯ್ ಎಸ್. ಕೋಟ್ಯಾನ್,ವಿನಯಾ ಡಿ.ಬಂಗೇರ,ಜೆರೋo ಮೆನೆಜಸ್, ಉದಯ್ ಸಾಲ್ಯಾನ್,ಸುರೇಶ ಸಾಲ್ಯಾನ್,  ಮತ್ತಿತರರು ಉಪಸ್ಥಿತರಿದ್ದರು.


 

ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget