ಕಾರ್ಕಳ,ಸೆ,11: ಯುವವಾಹಿನಿ, ಕಾರ್ಕಳ ಘಟಕದ 2020-21 ನೇ ಸಾಲಿನ ಪದಗ್ರಹಣ ಸಮಾರಂಭವು ಆದಿತ್ಯವಾರ(06/09/2020 )ದಂದು ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಮತ್ತು ನಿಯೋಜಿತ ಅಧ್ಯಕ್ಷ ಗಣೇಶ್ ಸಾಲ್ಯಾನ್ ಇವರ ನೇತೃತ್ವದಲ್ಲಿ ನಡೆಯಿತು.

ಈ ವೇಳೆ ಕಾರ್ಕಳ ಘಟಕಕ್ಕೆ ಸಹಕಾರ ಮಾಡಿದಂತಹ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಜಯಂತ್ ನಡುಬೈಲು ಇನ್ನೋರ್ವ ಅತಿಥಿ ಗೌರವ ಸಲಹೆಗಾರರಾದ ಶಂಕರ್ ಸುವರ್ಣ ಹಾಗೂ ಕೇಂದ್ರ ಸಮಿತಿಯ ಪ್ರಸ್ತುತ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಇವರನ್ನು ಅಭಿನಂದನಾ ಪೂರ್ವಕವಾಗಿ ಗೌರವಿಸಲಾಯಿತು. 2020-21ಸಾಲಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ನಿಯೋಜಿತ ಕಾರ್ಯದರ್ಶಿ ತಾರಾನಾಥ್ ಕೋಟ್ಯಾನ್ ವೇದಿಕೆಗೆ ಸ್ವಾಗತಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಇವರು ನೂತನ ಪದಾಧಿಕಾರಿಗಳನ್ನು ಗೌರವಿಸಿ, ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು, ನಂತರ ಮಾತನಾಡಿದ ಅವರು 2019-20ನೇ ಸಾಲಿನಲ್ಲಿ ಕಾರ್ಕಳ ಘಟಕವು ಸುಧಾಕರ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಪ್ರಥಮ ವರ್ಷದಲ್ಲೆ ಯಶಸ್ಸಿನ ಹೆಜ್ಜೆಯನ್ನಿಟ್ಟಿದೆ ಎಂದು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಸುಧಾಕರ್ ಪೂಜಾರಿಯವರು ಕಡತ ವಿನಿಮಯದೊಂದಿಗೆ ನೂತನ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ನೂತನ ಅಧ್ಯಕ್ಷರು ತಮ್ಮ ತಂಡವನ್ನು ಉದ್ದೇಶಿಸಿ ಮುಂದಿನ ಕಾರ್ಯಯೋಜನೆ ಬಗ್ಗೆ ಮಾತನಾಡಿ ಘಟಕದ ಯಶಸ್ಸಿಗೆ ಸರ್ವ ಸದಸ್ಯರ ಸಹಕಾರ ಯಾಚಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಸುಧಾಕರ್ ಪೂಜಾರಿ ದಂಪತಿಗಳನ್ನು ಮತ್ತು ಜೆ ಸಿ ಐ ಕಾರ್ಕಳ ರೂರಲ್ ನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಪ್ರಕಾಶ್ ಪೂಜಾರಿ ಹಾಗೂ ನಾಟಿ ವೈದ್ಯ ಹೊಸ್ಮಾರಿನ ಜಯ ಸುವರ್ಣ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಮಾಜದ ಐದು ಮಂದಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು . ಕೇಂದ್ರ ಸಮಿತಿಯ ಸಾಧು ಪೂಜಾರಿ ಹಾಗೂ ವಿವಿಧ ಬಿಲ್ಲವ ಸಂಘಟನೆಯ ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು. ಮುಖ್ಯ ಅತಿಥಿ ಶಂಕರ್ ಸುವರ್ಣ ಇವರು ಸಮಯೋಚಿತವಾಗಿ ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು. ಗಣೇಶ್ ಸಾಲ್ಯಾನ್ ಜೋಡುಕಟ್ಟೆ ಇವರು ಕಾರ್ಯಕ್ರಮ ನಿರ್ವಹಿಸಿದರು. ಯುವವಾಹಿನಿ ಕಾರ್ಕಳ ಘಟಕದ ಉಪಾಧ್ಯಕ್ಷ ಸಂತೋಷ್ ಪೂಜಾರಿ ಧನ್ಯವಾದ ಸಮರ್ಪಿಸಿದರು.
Post a comment