ಕಾರ್ಕಳ,ಸೆ 12:ಸೌತ್ ಕೆನರಾ ಫೋಟೋಗ್ರಾಫ್ ಅಸೋಸಿಯೇಷನ್ ಕಾರ್ಕಳ ವಲಯ ಇವರಿಂದ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಲೂರು ಇಲ್ಲಿನ ಶಿಕ್ಷಕರನ್ನು ಹಾಗೂ ಶಾಲೆಯನ್ನು ಗೌರವಿಸಿ ಅಭಿನಂದನಾ ಪತ್ರ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸೌತ್ ಕೆನರಾ ಫೋಟೋಗ್ರಾಫ್ ಅಸೋಸಿಯೇಷನ್ ಕಾರ್ಕಳ ವಲಯ ಅಧ್ಯಕ್ಷರು ಭಾಸ್ಕರ್ ಕುಲಾಲ್, ಕಾರ್ಯದರ್ಶಿ ಸೀತಾರಾಮ್, ಕ್ರೀಡಾ ಕಾರ್ಯದರ್ಶಿ ಪ್ರಸಾದ್ ಐಸಿರ, ಉದ್ಯಮಿ ಸತೀಶ್ ಶೆಟ್ಟಿ,ಉಮಾನಾಥ ಚಂದ್ರಶೇಖರ್ , ಸೋಮಯ್ಯ ಹಿರೇಮಠ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
Post a comment