ಬಂಟ್ವಾಳ,ಸೆ,16: ಕಿಡಿಗೇಡಿಗಳು ಬಂಟ್ವಾಳ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಎಂ ಎಸ್ ಅವರ ಫೇಸ್ಬುಕ್ ಖಾತೆಯ ನಕಲಿ ಅಕೌಂಟ್ ಅನ್ನು ತೆರೆದಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಅವರು, ಯಾರೋ ತನ್ನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಲ್ಲಿ ಸ್ವೀಕಾರ ಮಾಡಿಕೊಳ್ಳಬೇಡಿ,ಮೋಸಕ್ಕೆ ಒಳಗಾಗಬೇಡಿ ಎಂದು ತನ್ನ ಫೇಸ್ ಬುಕ್ ನ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Post a comment