ಬೆಂಗಳೂರು,ಸೆ,15: ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಅತ್ತ ರಾಗಿಣಿ ನ್ಯಾಯಾಂಗ ಬಂಧನದಲ್ಲಿದ್ದರೆ ಇತ್ತ ಅವರ ಪೋಷಕರು ಅವರ ಕನಸಿನ ಮನೆಯ ಮಾರಾಟಕ್ಕೆ ಮುಂದಾಗಿದ್ದಾರೆ.

ಯಲಹಂಕದ ಜ್ಯುಡಿಶಿಯಲ್ ಲೇಔಟ್ನಲ್ಲಿರುವ ಅವರ ಮನೆಯನ್ನು ಖಾಸಗಿ ವೆಬ್ ಸೈಟ್ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಅನನ್ಯ ಅಪಾರ್ಟ್ಮೆಂಟ್ನ 2ನೇ ಮಹಡಿಯಲ್ಲಿ ನಟಿ ರಾಗಿಣಿ ಹೆಚ್ಚು ಖರ್ಚು ಮಾಡಿ ಪ್ಲಾಟ್ ನ್ನು ಖರೀದಿಸಿ ಇಂಟೀರಿಯರ್ ಡೆಕೋರೇಶನ್ ಮಾಡಿಸಿಕೊಂಡಿದ್ದರು.
ಇದೀಗ ರಾಗಿಣಿಯ ಮೂರು ಬೆಡ್ ರೂಮ್ ಗಳ 2061 ಚದರಡಿಯ ವಿಶಾಲ ಮನೆಯನ್ನು ಅವರ ತಂದೆ ರಾಕೇಶ್ ದ್ವಿವೇದಿ 2 ಕೋಟಿ ರೂ.ಗೆ ಮಾರಾಟಕ್ಕಿಟ್ಟಿದ್ದಾರೆ. ಮಗಳು ಜೈಲಿನಲ್ಲಿರುವಾಗ ತಂದೆ ಮೌನವಾಗಿ ಇತ್ತ ಮನೆಯನ್ನು ಮಾರಾಟಕ್ಕೆ ಮುಂದಾಗಿದ್ದು, ಹಲವು ನಿಗೂಢ ಪ್ರಶ್ನೆಗಳಿಗೆ ಕಾರಣವಾಗಿದೆ.
Post a comment