ಕಾರ್ಕಳ,ಸೆ,9: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಹಾಗೂ ಆನ್ಸ್ ಕ್ಲಬ್ಬಿನ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ವಾರದ ವಿಶೇಷ ಸಭೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕ್ಲಬ್ಬಿನ ಅಧ್ಯಕ್ಷರಾದ ರೊ. ಪ್ರಶಾಂತ್ ಬೆಳಿರಾಯ ಇವರು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಹಾಗೂ ಎಂ ಪಿ ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರೊ. ಶ್ರೀವರ್ಮಾ ಅಜ್ರಿ ಭಾಗವಹಿಸಿದ್ದರು.
ಕ್ಷೇತ್ರಶಿಕ್ಷಣಾಧಿಕಾರಿಗಳು ತಮ್ಮ ಸಂದೇಶದಲ್ಲಿ ,ವಿಶ್ವಗುರುವಾಗಿರುವ ನಮ್ಮ ರಾಷ್ಟ್ರದ ಗುರು ಪರಂಪರೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸುವ ಬಗ್ಗೆ ಮಾತನಾಡಿದರು. ಪ್ರಾಂಶುಪಾಲರಾದ ರೊಟೇರಿಯನ್ ಶ್ರೀವರ್ಮಾ ಅಜ್ರಿಯವರು ತಮ್ಮ ಮುಖ್ಯ ಭಾಷಣದಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಹಾಗೂ ಮುಂದಿನ ಹೊಸ ಶಿಕ್ಷಣ ನೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಸದಾಶಿವ ಬಾಯರಿ, ಶ್ರೀ ಸುರೇಶ್ ಪೂಜಾರಿ, ಶ್ರೀಮತಿ ಪ್ರತಿಭಾ, ಶ್ರೀಮತಿ ಯಶೋಧ ಹಾಗೂ ಶ್ರೀಮತಿ ವಿಶಾಲಾಕ್ಷಿ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯಂದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ನಮ್ಮ ಆನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ಮೇಘ ಪ್ರಶಾಂತ್ ಜೈನ್ ಅವರು ಉಪಸ್ಥಿತರಿದ್ದರು. ರೊ. ಗೀತಾ ರಾವ್ ಪ್ರಾರ್ಥನಾ ಗೀತೆ ಹಾಡಿದರು. ರೊ. ಪ್ರಕಾಶ್ ವಾಗ್ಲೆ ಹಾಗೂ ಆನ್ ಶ್ರೀಮತಿ ಲಕ್ಷ್ಮಿ ಹೆಗಡೆ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ರೊ. ಗಣೇಶ್ ವಂದನಾರ್ಪಣೆ ಗೈದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರಾದ ರೊ. ಚಂದ್ರಶೇಖರ್ ಹೆಗ್ಡೆ, ದಾನಿಗಳಾದ ಶ್ರೀ ಜಗದೀಶ್ ಹೆಗ್ಡೆ, ರೊ. ಸುರೇಂದ್ರ ನಾಯಕ್, ಕ್ಲಬ್ಬಿನ ಎಲ್ಲಾ ರೋಟೇರಿಯನ್ ಹಾಗೂ ಆನ್ ಸದಸ್ಯರು, ಶಿಕ್ಷಕ ವೃಂದದವರು, ಹಿತೈಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Post a comment