ನವದೆಹಲಿ,ಸೆ,14: ಟೀಮ್ ಇಂಡಿಯಾ ದ ಮಾಜಿ ವೇಗಿ ಎಸ್ ಶ್ರೀಶಾಂತ್ ಮೇಲಿನ, 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದ ಏಳು ವರ್ಷಗಳ ನಿಷೇಧ ಭಾನುವಾರ ಮುಕ್ತಾಯಗೊಂಡಿದ್ದು, ಸ್ಪರ್ಧಾತ್ಮಕ ಕ್ರಿಕೆಟಿನ ಕಣಕ್ಕೆ ಮರಳಲು ಶ್ರೀಶಾಂತ್ ಸಜ್ಜಾಗಿದ್ದಾರೆ. ನಾನೀಗ ಸಂಪೂರ್ಣ ಸ್ವತಂತ್ರ ಎಂದಿರುವ ವೇಗಿ ಶ್ರೀಶಾಂತ್ ಇನ್ನೂ ಆರೇಳು ವರ್ಷಗಳ ಕಾಲ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಮುಂಬರುವ ದೇಶೀ ಕ್ರಿಕೆಟ್ ನಲ್ಲಿ ತವರು ರಾಜ್ಯ ಕೇರಳ ಪರ ರಣಜಿ ಟ್ರೋಫಿ ಯಲ್ಲಿ ಆಡುವ ಸಿದ್ಧತೆ ನಡೆಸಿರುವ ಶ್ರೀಶಾಂತ್ ಇದಕ್ಕಾಗಿ ಫಾರ್ಮ್ ಹಾಗು ಫಿಟ್ನೆಸ್ ಸಾಬೀತುಪಡಿಸಬೇಕಾಗಿದೆ. ಈಗಾಗಲೇ ಅವರು ಕೊಚ್ಚಿಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. "ನಾನೀಗ ಎಲ್ಲ ಆರೋಪದಿಂದ ಮುಕ್ತನಾಗಿದ್ದೇನೆ. ನಾನು ಹೆಚ್ಚು ಇಷ್ಟ ಪಡುವ ಆಟವನ್ನು ಮತ್ತೆ ಆಡಬಹುದಾಗಿದೆ. ನಾನಿನ್ನೂ ಪ್ರತಿ ಅಭ್ಯಾಸದಲ್ಲೂ ಎಸೆತದಲ್ಲೂ ಶ್ರೇಷ್ಠ ನಿರ್ವಹಣೆ ತೋರುವೆ" ಎಂದಿದ್ದಾರೆ ಶ್ರೀಶಾಂತ್. "ನಾನಿನ್ನು 5ರಿಂದ ಗರಿಷ್ಟ 7 ವರ್ಷದವರೆಗೆ ಆಡಲು ಬಯಸುವೆ. ನಾನು ಆಡುವ ಯಾವುದೇ ತಂಡದ ಪರ ನನ್ನ ಶ್ರೇಷ್ಠ ನಿರ್ವಹಣೆಯನ್ನೇ ತೋರುವೆ" ಎಂದು ಹೇಳಿದ್ದಾರೆ ಶ್ರೀಶಾಂತ್.
2007ರ ಟಿ 20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗಿಯಾಗಿದ್ದ ಶ್ರೀಶಾಂತ್ , ೨೦೧೩ರ್ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಮೊದಲಿಗೆ ಅಜೀವ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಬಳಿಕ ಅವರು ಸುಪ್ರೀಂ ಕೋರ್ಟ್ ಮೊರೆ ಹೋದ ಕಾರಣ ಶಿಕ್ಷೆಯ ಪ್ರಮಾಣ ಏಳು ವರ್ಷಕ್ಕೆ ಇಳಿಕೆಯಾಗಿತ್ತು.
Post a comment