ಕಾರ್ಕಳ,ಸೆ,18 : ಯುವವಾಹಿನಿ ಕಾರ್ಕಳ ಘಟಕ , ರೋಟರಿ ಆ್ಯನ್ಸ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಇವರ ವತಿಯಿಂದ ಪರಪ್ಪಾಡಿ ನಲ್ಲೂರಿನ 2 ಬಡ ಕುಟುಂಬಗಳಾದ ಮಮತಾ ದಿನೇಶ್ ಹಾಗೂ ವನಿತಾ ಆನಂದರವರ ಮನೆಗೆ ಶುಕ್ರವಾರ ಸೋಲಾರ್ ಲೈಟ್ ಅನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಸಾಲಿಯಾನ್, ಕಾರ್ಯದರ್ಶಿ ತಾರಾನಾಥ ಕೋಟ್ಯಾನ್, ರೋಟರಿ ಆ್ಯನ್ಸ್ ಸಂಸ್ಥೆಯ ಅಧ್ಯಕ್ಷರಾದ ರಮಿತಾ ಶೈಲೇಂದ್ರ ರಾವ್, ಪರಪ್ಪಾಡಿ ನಲ್ಲೂರು ಶಾಲೆಯ ಮುಖ್ಯಶಿಕ್ಷಕರಾದ ಪೂರ್ಣಿಮಾ ಶೆಣೈ, ರೋರ್ಯಾಕ್ಟ್ ಸದಸ್ಯರಾದ ಸಮೀರ್ ಹಾಗೂ ಕಾರ್ಕಳ ಯುವವಾಹಿನಿ ಘಟಕದ ಸ್ಥಾಪಕಾಧ್ಯಕ್ಷರಾದ ಸುಧಾಕರ್ ಪೂಜಾರಿ, ಉಪಾಧ್ಯಕ್ಷರಾದ ಮಮತಾ ಅಂಚನ್, ನಿರ್ದೇಶಕರಾದ ಅಶೋಕ್ ಸುವರ್ಣ, ಪ್ರಕಾಶ್ ಕೋಟ್ಯಾನ್, ಸಂದೇಶ್ ಕೋಟ್ಯಾನ್, ಸುರೇಂದ್ರ ಪತ್ತೊಂಜಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
Post a comment