ಅನಿಶಾ ಪೂಜಾರಿ ಸಾವಿನ ಪ್ರಕರಣ:ಆರೋಪಿ ಚೇತನ್ ಶೆಟ್ಟಿ ಬಂಧನ-Times Of Karkala
ಬ್ರಹ್ಮಾವರ,ಸೆ 4:ಅನಿಷಾ ಪೂಜಾರಿಯ ಆತ್ಮಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಮೃತ ಅನಿಷಾ ಪೂಜಾರಿಯ ಪ್ರಿಯಕರ ಚೇತನ್ ಶೆಟ್ಟಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿ ಪ್ರಿಯಕರ ಚೇತನ್ ಶೆಟ್ಟಿ ಮೈಸೂರಿನಲ್ಲಿ ಇದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪ್ರಕರಣದ ಜಾಡು ಹಿಡಿದ ಬ್ರಹ್ಮಾವರ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದರು.ಈ ನಡುವೆ ಆತ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದ್ದು, ಅಲ್ಲಿಂದಲೇ ಪೊಲೀಸರು ಆತನನ್ನು ಬುಧವಾರ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ಗುರುವಾರ ಬ್ರಹ್ಮಾವರಕ್ಕೆ ಕರೆ ತರಲಾಗಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಅನಿಶಾ ಹಾಗೂ ಚೇತನ್ ಶೆಟ್ಟಿ ಕಳೆದ ಐದು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನುವ ವಿಚಾರ ಕಾಲ್ ರೆಕಾರ್ಡ್ ಹಾಗೂ ಆಕೆ ಬರೆದಿಟ್ಟಿರುವ ಡೆತ್ ನೋಟ್ ಮೂಲಕ ಸಾಬೀತಾಗಿದೆ.ಇತ್ತೀಚಿಗೆ ಅನಿಶಾ ಮದುವೆ ಪ್ರಸ್ತಾಪ ಎತ್ತಿದಾಗ ಆರೋಪಿಯು ಮನೆಯವರ ವಿರೋಧವಿದೆ ಎಂದು ತಪ್ಪಿಸಿಕೊಂಡಿದ್ದ. ಇದರಿಂದಾಗಿ ತೀವ್ರವಾಗಿ ನೊಂದುಕೊಂಡಿದ್ದ ಯುವತಿ ಯುವಕನಲ್ಲಿ ಹೇಳಿಕೊಂಡೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
Post a comment