ಕಾರ್ಕಳ:ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಶಿಕ್ಷಕಿಗೆ ಸನ್ಮಾನ -Times Of Karkala

ಕಾರ್ಕಳ, ಸೆ 6: ಶಿಕ್ಷಕರ ದಿನಾಚರಣೆ ಪ್ರಯುಕ್ತ  ಕಾರ್ಕಳದ ಶಿಕ್ಷಕಿ ನಳಿನಿ ಆಚಾರ್ಯ ಇವರನ್ನು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆಯವರು, ಸಮಾಜದ ಶಿಲ್ಪಿಗಳೂ,  ನಮ್ಮ ಇಡೀ ಬದುಕನ್ನು ರೂಪಿಸ ಬಲ್ಲಂತಹ ಶಿಕ್ಷಕರೆಲ್ಲರೂ ಪ್ರಾಂತ: ಸ್ಮರಣೀಯರು. ಉತ್ತಮ ಸಮಾಜದ ರೂಪಕರಾದ ಶಿಕ್ಷಕರ ಋಣ ನಮ್ಮ ಮೇಲಿದೆ ಹಾಗಾಗಿ ನಾವಿಂದು ಶಿಕ್ಷಕರನ್ನು ಗೌರವಿಸೋಣ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ನ ರಾಜ್ಯ  ನಾಯಕಿಯರಾದ  ಸುರೇಖ ಚಂದ್ರಹಾಸ, ಅಪ್ಪಿ ಮಂಗಳೂರು, ಉತ್ತರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಕೆಪಿಸಿಸಿ ಕಾರ್ಯದರ್ಶಿ ಶ್ರೀಮತಿ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ , ಉಡುಪಿ ಬ್ಲಾಕ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ ಹಿರಿಯಡ್ಕ ಬ್ಲಾಕ್ ಅಧ್ಯಕ್ಷೆ ಸಂಧ್ಯಾ ಶೆಟ್ಟಿ, ಕಾಪು ಬ್ಲಾಕ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಬ್ರಹ್ಮಾವರ ಬ್ಲಾಕ್ ಅಧ್ಯಕ್ಷೆ ಗೋಪಿ ನಾಯ್ಕ, ವಂಡ್ಸೆ ಬ್ಲಾಕ್ ಅಧ್ಯಕ್ಷೆ ಮಂಜುಳಾ ದೇವಡಿಗ , ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜ್ಯೋತಿ ಮೆನನ್, ಪ್ರಭಾ ಕಾರ್ಕಳ, ಸುಗುಣ ಪೂಜಾರ್ತಿ ಮುಂತಾದವರು ಉಪಸ್ಥಿತರಿದ್ದರು.


 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget