ಈದು:ವಾಹನ ಅಡ್ಡಗಟ್ಟಿ ಹಲ್ಲೆ:ಜೀವಬೆದರಿಕೆ-Times of karkala
ಕಾರ್ಕಳ,ಸೆ.10:ವ್ಯಕ್ತಿಯ ಮೇಲೆ ವಾಹನ ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಬಳಿ ವರದಿಯಾಗಿದೆ.ಸುಜಯ ದೇವಾಡಿಗ ಹಲ್ಲೆಗೊಳಗಾದ ವ್ಯಕ್ತಿ.
ಇವರು ದಿನಾಂಕ 08 ರಂದು ಸಂಜೆ ಸುಮಾರು 7:00 ಗಂಟೆಗೆ ಅಂಗಡಿಗೆ ಈದು ಗ್ರಾಮದ ಜಂಗೊಟ್ಟು ಮಂಗಳ ಫಾರಂ ಬಳಿ ರಸ್ತೆಯಲ್ಲಿ ತನ್ನ ಸ್ಕೂಟಿಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಸ್ವೀಪ್ಟ್ ಕಾರಿನಲ್ಲಿ ಬಂದ ಮುನ್ನ ಯಾನೆ ಯೋಗೇಶ್, ರವಿ ಆಚಾರಿ, ಅಭಿ ಎಂಬುವವರು ಸುಜಯ ದೇವಾಡಿಗರ ಸ್ಕೂಟಿಗೆ ಕಾರನ್ನು ಅಡ್ಡವಾಗಿ ನಿಲ್ಲಿಸಿ ನಿನ್ನನ್ನು ಜೀವಂತ ಬಿಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು, ಯೋಗೇಶ್ ಎಂಬುವನು ಕೈಯಿಂದ ಎಡಕೆನ್ನೆಗೆ ಹಾಗೂ ರವಿ ಆಚಾರಿ , ಅಭಿ ಎಂಬವರು ಮುಖಕ್ಕೆ ಹೊಡೆದಿದ್ದಾರೆ.
ಇದರ ಪರಿಣಾಮ ಸುಜಯರವರ ಎಡಕಣ್ಣು ಮತ್ತು ಕಿವಿಯ ಭಾಗದಲ್ಲಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ . ಈ ಬಗ್ಗೆ ಕಾರ್ಕಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Post a comment