ಕಾರ್ಕಳ,ಸೆ.12: ನಗರ ಠಾಣಾ ವ್ಯಾಪ್ತಿಯ ಪತ್ತೊಂಜಿಕಟ್ಟೆ ಕಜೆ ರಸ್ತೆ ನಿವಾಸಿ ಮಹಮದ್ ಅಜರ್(28) ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಸೆ.09 ರಂದು ಬಂಧಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯ ಬಳಿಕ ಆತ ಗಾಂಜಾ ಸೇವಿಸಿರುವದು ದೃಢಪಟ್ಟಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ನಗರ ಠಾಣಾ ವ್ಯಾಪ್ತಿಯ ಬಂಗ್ಲೆಗುಡ್ಡೆ ಬಳಿ ಗಾಂಜಾ ಸೇವಿಸುತ್ತಿದ್ದ ಕುಕ್ಕುಂದೂರು ನಿವಾಸಿ ಪ್ರಜ್ವಲ್(25) ಎಂಬಾತನನ್ನು ನಗರ ಪೊಲೀಸರು ಸೆ.10 ಕ್ಕೆ ವಶಕ್ಕೆ ಪಡೆದುಕೊಂಡಿದ್ದಾರೆ.
Post a comment