ಇನ್ನಾ,ಸೆ.07:ಭಾನುವಾರದ ಬಿಡುವಿನಲ್ಲಿ ಇನ್ನಾ ಗ್ರಾಮದ ಯುವಕರು ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿದರು.
ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಅನಪೇಕ್ಷಿತ ಹುಲ್ಲು, ಗಿಡಗಳು, ಪೊದೆಗಳನ್ನು ಕತ್ತರಿಸುವ ಕೆಲಸದಲ್ಲಿ ಗ್ರಾಮದ ಯುವಕರು ಪಾಲ್ಗೊಂಡರು. ಸ್ವಚ್ಚತಾ ಕಾರ್ಯಕ್ರಮಕ್ಕೆ ಶ್ರೀ ದೇವಳದ ಅರ್ಚಕ ವೃಂದ ಹಾಗೂ ಊರಿನ ಹಿರಿಯರು ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಇನ್ನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕುಶ.ಆರ್.ಮೂಲ್ಯ ಮಾಜಿ ಸದಸ್ಯರಾದ ಅಲೆನ್ ಡಿಸೋಜ,ನಿವೃತ್ತ ಶಿಕ್ಷಕರಾದ ಸುಬ್ರಹ್ಮಣ್ಯತಂತ್ರಿ ಲಕ್ಷ್ಮೀಕಾಂತ್ ರಾವ್,ತಾರಾನಾಥ ಪೂಜಾರಿ,ಪ್ರಕಾಶ ಮೂಲ್ಯ ಸುರೇಶ್ ಮೂಲ್ಯ ಹರೀಶ್ ಶೆಟ್ಟಿ,ಯಶವಂತ ಶೆಟ್ಟಿ,ದೇವದಾಸ್ ಪೂಜಾರಿ,ಉಮೇಶ ವಸಂತಶೆಟ್ಟಿ,ರಾಜು.ನವೀನ್ ರವೀಂದ್ರ ಶೆಟ್ಟಿ, ಜಯ ಕೋಟ್ಯಾನ್ ಗಿರಿಯಪ್ಪ ಪೂಜಾರಿ ಸುಧೀರ್,ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
Post a comment