ಗೋಹತ್ಯೆ ನಿಷೇಧ ಮಸೂದೆ ಜಾರಿಯಾಗಲಿ:ಪೇಜಾವರ ಶ್ರೀ-Times of karkala

ಉಡುಪಿ,ಸೆ.17:ಗೋವುಗಳ ಸುರಕ್ಷತೆಗಾಗಿ ಗೋಹತ್ಯೆ ನಿಲ್ಲಬೇಕಾದರೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆಯನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ. 



ರಾಜ್ಯದಲ್ಲಿ  ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯಿದೆಯು ಅತ್ಯಂತ  ದುರ್ಬಲವಾಗಿದೆ. ನಮ್ಮ ಸುತ್ತ್ತಮುತ್ತಲಿನ  ಪರಿಸರದಲ್ಲಿ  ಗೋವುಗಳ ಕಳ್ಳತನ, ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಹಿಂಸಾತ್ಮಕ ರೀತಿಯಲ್ಲಿ ಅವುಗಳ ಸಾಗಾಟ ನಡೆಯುತ್ತಿದೆ. ಇವುಗಳನ್ನೆಲ್ಲ ಕಾನೂನಿನ ರೀತಿಯಲ್ಲಿ ತಡೆಗಟ್ಟಬೇಕಾಗುತ್ತದೆ. ಗೋವಂಶದ ಹತ್ಯೆ ತಡೆಯಲು, ಗೋವುಗಳ ಸಂತತಿ ಉಳಿಸಲು ಪ್ರಬಲವಾದ ಕಾನೂನು ತರಲು ಪ್ರಸಕ್ತ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಅದನ್ನು ಜಾರಿಗೊಳಿಸಬೇಕು. ಆ ಮೂಲಕ ನಾಡಿನ ಸಮಸ್ತ ಗೋಪ್ರೇಮಿಗಳ ಆಗ್ರಹವನ್ನು ಮಂಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

 

ಜಾಹೀರಾತು

































Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget