ಜ್ಞಾನಸುಧಾ ಕಾಲೇಜು:ರಸಾಯನ ಶಾಸ್ತ್ರ ಪ್ರಯೋಗಾಲಯ ಉದ್ಘಾಟನೆ-Times of karkala

ಕಾರ್ಕಳ,ಸೆ.07:ಲ್ಯಾಬ್ ಎಂದರೇ ಅಡುಗೆ ಕೋಣೆ ಇದ್ದಂತೆ. ಮೂಲ ವಸ್ತುಗಳ ಬೋಧನೆ ಹಾಗೂ ಅಧ್ಯಯನವೇ ರಸಾಯನ ಶಾಸ್ತ್ರದ  ಉದ್ದೇಶವಾಗಿದೆ. ಆ ಮೂಲಕ ಜ್ಞಾನಸುಧಾ ಶಿಕ್ಷಣ ಸಂಸ್ಥೆಯು   ಸುಮಾರು 25ಲಕ್ಷ ರೂಪಾಯಿ ವೆಚ್ಚದಲ್ಲಿ ಬಹು ಸುಸ್ಸಜ್ಜಿತವಾದ ಪ್ರಯೋಗಾಲಯವನ್ನು ನಿರ್ಮಿಸಿರುವುದು ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಹಾಗೂ ಪಳ್ಳಿ  ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ಪಿ.ವಸಂತ ಆಚಾರ್ ಹೇಳಿದರು.  ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡ ರಸಾಯನ ಶಾಸ್ತç ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದರು. 

ಬೋಧಕನಾದವನು ತಾನೂ ಹೊಸ ವಿಚಾರಗಳನ್ನು ಕಲಿಯುತ್ತಾ ವಿದ್ಯಾರ್ಥಿಗಳನ್ನು ಅತ್ತ ಕಡೆಗೆ ಉತ್ತಮ ಪ್ರಯೋಗಶಾಲಿಗಳನ್ನಾಗಿ   ಮಾಡಿ ಜ್ಞಾನಧಾರೆ ಎರೆದಾಗ ವೃತ್ತಿಗೆ ಬೆಲೆ ಸಿಕ್ಕಂತೆ ಎಂದು ಶಿಕ್ಷಕರ ದಿನಾಚರಣೆಯ ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಜೆಕಾರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ ಸುಧಾಕರ ಶೆಟ್ಟಿಯವರು ಶಿಕ್ಷಣವೆಂದರೇ ಬರೀ ಅಂಕ ಗಳಿಸುವ ಸಾಧನವಾಗಿರz ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ದಾರಿಯಾಗ ಬೇಕು. ಇದನ್ನು ರೂಪಿಸುವ ಶಿಕ್ಷಕರ ಪಾತ್ರ ಬಹಳಷ್ಟು ಪ್ರಮುಖವಾಗಿರುತ್ತದೆ. ಅಂತಹ ಶಿಕ್ಷಕರು ನಾವಾಗಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಮಾತುಗಳನ್ನಾಡಿದ ಎ.ಪಿ.ಜಿ.ಇ.ಟಿ ಆಡಳಿತ ಮಂಡಳಿ ಸದಸ್ಯ ಶ್ರೀ ಅನಿಲ್ ಕುಮಾರ್ ಜೈನ್ ಶಿಕ್ಷಕನ ಬೋಧನೆ ವಿದ್ಯಾರ್ಥಿಯ ಮೆದುಳಿಗೆ ತುಂಬಿಸುವುದಾಗದೆ ಅವರ ಮನಸ್ಸನ್ನು ಗೆದ್ದು ಹೃದಯವನ್ನು ತುಂಬುವ ಜ್ಞಾನಧಾರೆಯಾಗ ಬೇಕುಎಂದರು. 

ಕಾರ್ಯಕ್ರಮದಲ್ಲಿ ಎಪಿಜಿಇಟಿ ಟ್ರಸ್ಟಿಗಳಾದ ಶ್ರೀ ಕರುಣಾಕರ ಶೆಟ್ಟಿ, ಶ್ರೀಮತಿ ವಿದ್ಯಾ ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಡಾ. ಪ್ರಕಾಶ್ ಶೆಣೈ, ಸಂಸ್ಥೆಯ ಹಿತೈಷಿಗಳಾದ ಶ್ರೀ ತ್ರಿವಿಕ್ರಮ ಕಿಣಿ, ಶ್ರೀ ದೇವೇಂದ್ರ ನಾಯಕ್, ಶ್ರೀ ಸುಕುಮಾರ ಶೆಟ್ಟಿ, ಉಭಯ ಸಂಸ್ಥೆಗಳ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್, ಶ್ರೀಮತಿ ಉಷಾ ರಾವ್ ಯು ಉಪಸ್ಥಿತರಿದ್ದರು. 

ಉಪನ್ಯಾಸಕ ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ಪ್ರಿನ್ಸಿಪಾಲ್ ದಿನೇಶ್ ಎಂ ಕೊಡವೂರ್ ಸ್ವಾಗತಿಸಿದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಿಥುನ್ ಯು  ವಂದಿಸಿದರು. 

 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget