ಮಾಳ:ದಿ.ರಾಜು ಪೂಜಾರಿ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ-Times of karkala

ಮಾಳ:ದಿ.ರಾಜು ಪೂಜಾರಿ ಇವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ-Times of karkala 

ಮಾಳ,ಸೆ.05:ಶುಭ ಗ್ರಾಫಿಕ್ಸ್ ನ ಮಾಲಕರಾದ ಸಂತೋಷ ಪೂಜಾರಿ ಕಾರ್ಕಳ ಇವರು ತಮ್ಮ ತಂದೆ ದಿ| ರಾಜು ಪೂಜಾರಿ ಇವರ ಸ್ಮರಣಾರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ - ಮಾಳ ಇಲ್ಲಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು.

ಈ ಸಂಧರ್ಭ ಮಾತನಾಡಿದ ಅವರು ತಮ್ಮ ಶೈಕ್ಷಣಿಕ ಜೀವನದ ಅವಿಸ್ಮರಣೀಯ ಸಂದರ್ಭಗಳನ್ನು ನೆನಪಿಸಿಕೊಂಡು ಮಕ್ಕಳಿಗೆ ಕಲಿಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು. ಶೈಕ್ಷಣಿಕ ಪ್ರಗತಿಯೇ ದೇಶದ ಪ್ರಗತಿಯ ಮೂಲಮಂತ್ರ ಎಂಬ ಗುರಿಯೊಂದಿಗೆ ಎಲ್ಲಾ ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಅಭಿಪ್ರಾಯಪಟ್ಟರು. 

ವೇದಿಕೆಯಲ್ಲಿ ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ  ವಂಕಟೇಶ ಗೋರೆ, ಜೇಸಿಐ ಕಾರ್ಕಳ ರೂರಲ್ ಅಧ್ಯಕ್ಷರಾದ ಜೇಸಿ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಆನಂದ ಮಾಳ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ವಸಂತ ಶೆಟ್ಟಿ, ಮುಖ್ಯ ಶಿಕ್ಷಕಿ ಶ್ರೀಮತಿ ಜಯಾ ಕೆ. ಮೊಯಿಲಿ, ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಜಯಮ್ಮ ಹಾಗೂ ಶಾಲೆಯ ಶಿಕ್ಷಕರೆಲ್ಲರೂ  ಉಸ್ಥಿತರಿದ್ದರು. 
 

ಜಾಹೀರಾತು

Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget