"ಡ್ರಗ್ಸ್ ದಂಧೆ ಮಟ್ಟ ಹಾಕಲು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ದಿಟ್ಟ ಕ್ರಮ"-ಜಿಲ್ಲಾ ಯುವ ಮೋರ್ಚಾ ಅಭಿನಂದನೆ-Times of karkala

ಉಡುಪಿ.ಸೆ.11:"ರಾಜ್ಯದ ಹೆಸರು ಮತ್ತು ನೆಮ್ಮದಿ ಕೆಡಿಸಿದ್ದ ಡ್ರಗ್ಸ್ ದಂಧೆ ವಿರುಧ್ದ ಈಗಾಗಲೇ ಬಹಳ ದಿಟ್ಟ ಕ್ರಮಗಳನ್ನು ತೆಗೆದುಕೊಂಡು ಅದನ್ನು ಮಟ್ಟ ಹಾಕಲು ಶ್ರಮಿಸುತ್ತಿರುವ ಬಿಎಸ್ವೈ ಅವರ ನೇತೃತ್ವದ ರಾಜ್ಯ ಸರ್ಕಾರ,ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆಗೆ ನಾವು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಭಿನಂದನೆ ಸಲ್ಲಿಸುತ್ತೇವೆ. ಅಲ್ಲದೆ  ಈ ಮಾಫಿಯಾದಲ್ಲಿ ಭಾಗಿ ಆಗಿರುವ ಯಾರೇ ಆಗಿರಲಿ ಅವರ ವಿರುದ್ಧ ತಾವು ಇದೇ ರೀತಿ ಕಠಿಣ ಕ್ರಮ ಜರುಗಿಸಬೇಕೆಂದು ನಮ್ಮ ಮನವಿ"


"ಮಾದಕ ವಸ್ತುಗಳ ಪಿಡುಗು ಇತ್ತೀಚಿಗೆ ನಮ್ಮ ರಾಜ್ಯದ ಯುವಜನತೆಯನ್ನು ಪ್ರಭಾವವಾಗಿ ಆವರಿಸುತ್ತಿರುವುದು ದುಖಃ ಕರ ಸಂಗತಿ.ಕೇವಲ ಯುವಜನತೆ ಅಷ್ಟೇ ಅಲ್ಲ, ಲಿಂಗಬೇಧವಿಲ್ಲದೆ ಎಲ್ಲ  ವಯೋಮಾನದವರು ಸಹ ಡ್ರಗ್ಸ ಎಂಬ ವಸ್ತುವಿಗೆ ವ್ಯಸನಿಗಳಾಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಈ ದುಶ್ಚಟ ಲೋಕದಲ್ಲಿ ಮುಳುಗಿ ಹಾಳಾಗುತ್ತಿದ್ದಾರೆ." 
 

"ಗಾಂಧೀಜಿಯವರು ವ್ಯಸನಮುಕ್ತ ಭಾರತದ ಕನಸು ಕಂಡಿದ್ದರು. ದಿನಗಳು ಕಳದಂತೆ ಈ ಆಧುನಿಕತೆಯಲ್ಲಿ ಡ್ರಗ್ಸ ಎಂಬ ವಸ್ತು ಬಹುತೇಕರ ಜೀವನದ ಅವಿಭಾಜ್ಯ ಅಂಗವಾಗಿಯೇ ಬಿಟ್ಟಿದೆ ಎಂಬ ಅನುಮಾನ ಸುಳ್ಳಲ್ಲ". 

"ಸಿನಿಮಾ ಕೇವಲ ಮನರಂಜನೆ ಕ್ಷೇತ್ರವಷ್ಟೇ ಆದರೆ ಸಿನಿಮಾರಂಗದ ನಟ,ನಟಿಯರನ್ನು ಅನುಸರಿಸುವ ಜನಾಂಗ ಅವರಂತೆ ಬದುಕಿನ ದಿನಗಳನ್ನು ದೂಡಲು ಇಚ್ಚೆ ಪಡುತ್ತಾರೆ. ಹೀಗಿರುವಾಗ ಕೆಲ ದಿನಗಳಿಂದ ಡ್ರಗ್ಸ ಕುರಿತಾದ ಅನೇಕ ಸಂಗತಿಗಳು ಬೆತ್ತಲೆವಾಗುತ್ತಿರುವಾಗ ಡ್ರಗ್ಸಿನ ಜಾಲ ಅದೆಷ್ಟು ತನ್ನ ಬಾಹುಗಳನ್ನು ಬಾಚಿ, ಸಿನಿಮಾರಂಗವಷ್ಟೆ ಅಲ್ಲದೆ ಸಾಮಾನ್ಯ ಯುವಜನತೆಯನ್ನು ಸಹ ಅಪ್ಪಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿರುವಾಗ ಡ್ರಗ್ಸನ ಕುರಿತಾದ ಜನಜಾಗೃತಿ ಮಾಡುವ ಅವಶ್ಯಕತೆ ಇದೆ.ಅದೇ ಕೆಲಸ ಬಿಜೆಪಿ ಜಿಲ್ಲಾ ಯುವ ಮೋರ್ಚಾ  ಕರ್ನಾಟಕ ಮಾಡುತ್ತಿದೆ."


"ಆರೋಗ್ಯವೇ ಭಾಗ್ಯವೆಂಬ ಮಾತು ಕೇವಲ ಮಾತಾಗಿದೆ. ವಿವೇಕಾನಂದರು ಹೇಳುವಂತೆ ದೇಹ ಮತ್ತು ಆರೋಗ್ಯ ಸಧೃಡವಾಗಿದ್ದರೆ, ಸಾಧನೆ ಕ್ಷಣದ ಕೆಲಸ ಮತ್ತು ದೇಶ ಸಧೃಡವಾಗಿರಬೇಕೆಂದರೆ ಯುವಜನತೆ ಶಕ್ತಿಯುತವಾಗಿ ಆರೋಗ್ಯವಾಗಿ ಧೃಡವಾಗಿರಬೇಕೆಂಬ ಮಾತು ಅಕ್ಷರಶಃ ಸತ್ಯ."

"ಆದರೆ ಪ್ರಸುತ್ತ ಸ್ಥಿತಿಯಲ್ಲಿ ಡ್ರಗ್ಸ ಎಂಬ ಲೋಕದೊಳಗೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಜನತೆಯನ್ನು ಬಡಿದೆಬ್ಬಿಸಿ ಜಾಗೃತಿರನ್ನಾಗಿ ಮಾಡುವ ಕೆಲಸ ತುರ್ತಾಗಿ ಮತ್ತು ಅವಶ್ಯಕವಾಗಿ ಮಾಡಬೇಕಾಗಿದೆ." 

"ಅದಕ್ಕಾಗಿ ಪ್ರತಿಯೊಬ್ಬರಿಗು ಈ ಮಾದಕ ವಸ್ತುಗಳ ಪರಿಣಾಮಗಳನ್ನು ತಿಳಿಸುತ್ತಾ ವ್ಯಸನಿಗಳಾಗದಂತೆ ಜಾಗೃತಿ ಮಾಡಿಸುತ್ತ ಕರ್ನಾಟಕವನ್ನು ಸುಭದ್ರ ರಾಜ್ಯವನ್ನಾಗಿ ಮಾಡಲು  ಡ್ರಗ್ಸ ಮುಕ್ತ ಕರ್ನಾಟಕ ಅಭಿಯಾನ ಕೆಲಸ ಮಾಡಲಿದೆ."

 
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ, ಜೊತೆಗೆ ದೇಶದ ಮತ್ತು ರಾಜ್ಯದ ಅಭಿವೃದ್ಧಿ ಕೂಡಾ ಯುವಜನತೆಯ ಕೈಯಲ್ಲಿಯೇ ಇದೆ. ಡ್ರಗ್ಸ ಎಂಬ ಮಹಾಮಾರಿಗೆ ನಾವು ಬಲಿಯಾಗಬಾರದು ಮತ್ತು ಇತತರನ್ನು ಬಲಿಯಾಗದಂತೆ ಜಾಗೃತಿ ಮೂಡಿಸುವ ಕೆಲಸಕ್ಕೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಯತ್ನಿಸುತ್ತಿದೆ."


ಡ್ರಗ್ಸ ಮುಕ್ತ ಕರ್ನಾಟಕ ನಮ್ಮ ಸಂಕಲ್ಪವಾಗಲಿ. ವಿವೇಕಾನಂದರ ಮಾತಿನಂತೆ ಮಿಂಚಿನ ಕಾಂತಿಯುಳ್ಳ ಯುವಕರಾಗಿ ಬಾಳೋಣ. ದೇಶವನ್ನು ಕೂಡಾ ಅಭಿವೃದ್ಧಿಯ ಹಾದಿಯೆಡೆಗೆ ತೆಗೆದುಕೊಂಡು ಹೋಗೊಣ ಎಂದು ಉಡುಪಿ ಜಿಲ್ಲಾ  ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget