ಹೆಬ್ರಿ:ಹೆಬ್ರಿ ಸಿಟಿ ಲಯನ್ಸ್ ಕ್ಲಬ್ನ ಸರಣಿ ಕಾಯðಕ್ರಮ ಇಸಿಜಿ, ಮಧುಮೇಹ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಮಂಗಳವಾರ ಹೆಬ್ರಿ ರಾಘವೇಂದ್ರ ಜನರಲ್ ಆಸ್ಪತ್ರೆಯಲ್ಲಿ ನಡೆಯಿತು. ಅರಣ್ಯ ಇಲಾಖೆಯ ಹೆಬ್ರಿ ವನ್ಯಜೀವಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದ್ಧಿ ವರ್ಗದ 30 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ. ಭಾರ್ಗವಿ ಐತಾಳ್, ಹೆಬ್ರಿ ರಾಘವೇಂದ್ರ ಜನರಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ರಾಮಚಂದ್ರ ಐತಾಳ್, ಲಯನ್ಸ್ ಸ್ಥಾಪಕ ಅಧ್ಯಕ್ಷ ದಿನಕರ ಪ್ರಭು, ಹೆಬ್ರಿ ಲಯನ್ಸ್ ಕ್ಲಬ್ ಕಾರ್ಯದರ್ಶಿ,ರಾಮಚಂದ್ರ ಭಟ್, ಕೋಶಾಧಿಕಾರಿ ರಘುರಾಮ ಶೆಟ್ಟಿ, ಪೂರ್ವಾಧ್ಯಕ್ಷ ರಮೇಶ ಆಚಾರ್ಯ ಮತ್ತಿತರರು ಇದ್ದರು.
Post a comment