ಸಾಣೂರು,ಸೆ.15:ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವಕ ಮಂಡಲ (ರಿ.) ಸಾಣೂರು ಇದರ ಆಶ್ರಯದಲ್ಲಿ ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮ ಅಂಗವಾಗಿ ಸಾಣೂರು ಗ್ರಾಮದ ಯುವಕರಿಗೆ ಕಬಡ್ಡಿ ಪಂದ್ಯಾಟ ದಿನಾಂಕ: 13/9/2020 ನೇ ರವಿವಾರ ಬೆಳಿಗ್ಗೆ 9.00 ಗಂಟೆಗೆ ಯುವಕ ಮಂಡಲದ ಮೈದಾನದಲ್ಲಿ ನಡೆಯಿತು.
ಶ್ರೀಮತಿ ದಿವ್ಯಶ್ರೀ ಗಿರೀಶ್ ಅಮೀನ್ ಜಿಲ್ಲಾ ಪಂಚಾಯತ್ ಸದಸ್ಯರು ಮಿಯಾರು ಕ್ಷೇತ್ರ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅಭ್ಯಾಗತರಾಗಿ ಸಾಣೂರು ಯುವಕ ಮಂಡಲ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಪ್ರಕಾಶ್ ಮಡಿವಾಳ ಶಂಕರ್ ಶೆಟ್ಟಿ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಶ್ರೇಯಸ್ ಶೆಟ್ಟಿ,ಭಾಸ್ಕರ್ ಪೂಜಾರಿ ಭಾರ್ಗವಿ ಕನ್ಸ್ಟ್ರಕ್ಷನ್ ಸಾಣೂರು, ಪ್ರಕಾಶ್ ರಾವ್, ರಾಜೇಶ್, ಹರೀಶ್ ರಾವ್, ಉಪಸ್ಥಿತರಿದ್ದರು. ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಸಾಣೂರು ಗ್ರಾಮದ 8 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿತ್ತು.
ಬಹುಮಾನ ವಿತರಣೆ:
ಬಹುಮಾನ ವಿತರಣಾ ಸಮಾರಂಭದಲ್ಲಿ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಮಾಜಿ ಅಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ಸದಸ್ಯರಾದ ಶ್ರೇಯಸ್ ಶೆಟ್ಟಿ ಚೇತನ್ ಹರೀಶ್ ರಾವ್ ರೋಹಿತ್ ಇವರು ಉಪಸ್ಥಿತರಿದ್ದರು ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಸಾಣೂರು ಗ್ರಾಮದ 8 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿತ್ತು ವೈ ಎಸ್.= ಬಿ (ಎ) ಪ್ರಥಮ ವೈ ಎಸ್.. ಬಿ (ಬಿ ) ದ್ವಿತೀಯ ಬಹುಮಾನ ಪಡೆಯಿತು:

Post a comment