ಕಾರ್ಕಳ,ಸೆ.15: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಕಳ ವಿಧಾನಸಭಾ ಕ್ಷೇತ್ರ ನೇತೃತ್ವದಲ್ಲಿ ಶ್ರೀ ಪೇಜಾವರ ಮಠದ ಸ್ವಾಮೀಜಿಯವರ ಸಮ್ಮುಖದಲ್ಲಿ ನೀಲಾವರ ಗೋಶಾಲೆಗೆ ಹುಲ್ಲು ಹಸ್ತಾಂತರಿಸಲಾಯಿತು. ಕಾರ್ಕಳ ಶಾಸಕರ ವಿಕಾಸ ಜನಸೇವೆ ಕಚೇರಿಯಲ್ಲಿ ಭಾಜಪ ಕಾರ್ಕಳ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ ವಿಠಲ ಪೂಜಾರಿ,ಹಿಂದುಳಿದ ವರ್ಗ ಮೋರ್ಚಾದ ಉಡುಪಿ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು,ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಲಾಲ್,ಹಿಂದುಳಿದ ವರ್ಗ ಮೋರ್ಚಾ ಕಾರ್ಕಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಮಾನಂದ ಪೂಜಾರಿ ನಲ್ಲೂರು,ಹಿಂದುಳಿದ ವರ್ಗ ಮೋರ್ಚಾ ಕಾರ್ಯದರ್ಶಿ ಶ್ರೀನಿವಾಸ ಯರ್ಲಪಾಡಿ,ಹಿಂದುಳಿದ ವರ್ಗ ಮೋರ್ಚಾದ ತಾಲೂಕು ಕಾರ್ಯಕಾರಿಣಿ ಸಮಿತಿ ಸದಸ್ಯರಾದ ರತ್ನಾಕರ ಆಚಾರ್ಯ ಹೊಸ್ಮಾರು, ಮಹೇಶ್ ಮೂಲ್ಯ,ದಿನೇಶ್ ಸಾಲಿಯಾನ್, ಬೈಲೂರು ಶಕ್ತಿ ಕೇಂದ್ರದ ಹಿಂದುಳಿದ ಮೋರ್ಚಾ ಅಧ್ಯಕ್ಷ ದಿನೇಶ್ ಆಚಾರ್ಯ,ಸದಸ್ಯರಾದ ರಾಘವೇಂದ್ರ ಆಚಾರ್ಯ, ಸತೀಶ್ ಪೂಜಾರಿ ನಲ್ಲೂರು,ರಮೇಶ್ ಪೂಜಾರಿ ಉಪಸ್ಥಿತರಿದ್ದರು.
Post a comment