ಕಾರ್ಕಳ:ರೋಟರಿ ಆನ್ಸ್ ಕ್ಲಬ್ ಮತ್ತು ರೋಟರ್ಯಾಕ್ಟ್ ಕ್ಲಬ್ ಕಾರ್ಕಳದ ಜಂಟಿ ಆಶ್ರಯದಲ್ಲಿ ಪೋಷನ್ ಅಭಿಯಾನ ಕಾರ್ಯಕ್ರಮವು ಪರಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಲ್ಲೂರಿನಲ್ಲಿ ನಡೆಯಿತು.
ಪೋಷಕರಿಗೂ ಹಾಗೂ ಮತ್ತು ಮಕ್ಕಳಿಗೂ ಪೌಷ್ಟಿಕಾಂಶದ ವಿಷಯದ ಬಗ್ಗೆ ಮಾಹಿತಿಯನ್ನು ಕ್ಷೇತ್ರ ವೈದ್ಯಾಧಿಕಾರಿ ಶಶಿಧರ್ ಜೈನ್ ಮತ್ತು ಬಜಗೋಳಿಯ ಸರಕಾರಿ ಆಸ್ಪತ್ರೆಯ ಸಿಸ್ಟರ್ ಚೆಲುವಮ್ಮ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ಮುಮತಾಜ್ , ರೋಟರಿ ಆನ್ಸ್ ಅಧ್ಯಕ್ಷೆ ರಮಿತಾ ಶೈಲೆಂದ್ರ , ಹಾಗೂ ರೋಟರಾಕ್ಟ್ ನಿಯೋಜಿತ ಅಧ್ಯಕ್ಷ ರಾಹುಲ್, ನಿಯೋಜಿತ ಕಾರ್ಯದರ್ಶಿ ಸಮೀರ್ ಹೆಗ್ಗಡೆಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಶೆಣೈ, ಶಾಲಾಶಿಕ್ಷಕಿ ವಿದ್ಯಾ ಧನ್ಯವಾದ ಸಲ್ಲಿಸಿದರು.ಶಾಲೆಯ ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Post a comment