ಕಾರ್ಕಳ:ಮಟ್ಕಾ ಜೂಜಿಗೆ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯ ಬಂಧನ-Times of karkala

ಕಾರ್ಕಳ:ಕಲ್ಯಾ ಗ್ರಾಮದ ಹಾಳೆಕಟ್ಟೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಂದ ಮಟ್ಕಾ ಜೂಜಿಗೆ ಹಣ ಸಂಗ್ರಹಿಸುತ್ತಿದ್ದ ಆರೋಪಿಯೊಬ್ಬನನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ಬಂಧಿಸಿದ್ದಾರೆ.

ಬೋಳದ ಕೊಂಟಿಮಾರು ದರ್ಖಾಸು ನಿವಾಸಿ ವಿಕ್ಟರ್ ವಿಲ್ಸನ್ ಕೊರೆಯಾ(32) ಪ್ರಕರಣದ ಆರೋಪಿ. 

ತನ್ನ ಸ್ವಂತ ಲಾಭಗೋಸ್ಕರ 1 ರೂ ಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದನೆಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಪಣವಾಗಿಟ್ಟ ಹಣ ರೂ. 1075, ಮಟ್ಕಾ ಬರೆದ ಚೀಟಿ, ಬಾಲ್ ಪೆನ್ -01 ನ್ನು ಮಹಜರು ಮುಖೇನ ಪೊಲೀಸರು ವಶಪಡಿಸಿದ್ದಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.

 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget