ಕಾರ್ಕಳ:ವಿಶ್ವ ಹೃದಯ ದಿನದ ಪ್ರಯುಕ್ತ ಸೈಕಲ್ ಜಾಥಾ-Times of karkala

ಕಾರ್ಕಳ:ಅರಕ್ಷಕರ ಠಾಣೆ ಕಾರ್ಕಳ ಹಾಗೂ ರೋಟರಿ ಅನ್ಸ್ ಕ್ಲಬ್, ಯುವವಾಹಿನಿ ಕಾರ್ಕಳ ಮತ್ತು ರೋಟರ್ಯಾಕ್ಟ್ ಕ್ಲಬ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ  ವಿಶ್ವ ಹೃದಯ ದಿನದ ಪ್ರಯುಕ್ತ ಆನೆಕೆರೆ ವೃತ್ತದಿಂದ ಬಂಡಿಮಠದ ವರೆಗೆ ಸೈಕಲ್ ಜಾಥಾ ನಡೆಯಿತು.

ಸುಮ ಕೇಶವ್ ಇವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಒಟ್ಟು  110 ಮಂದಿ ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು.


ವಿಶೇಷ ಆಕರ್ಷಣೆ:ಪ್ರಥಮ್ ಕಾಮತ್ ಅವರು ಕಣ್ಣಿಗೆ ಬಟ್ಟೆ ಕಟ್ಟಿ ಸೈಕಲ್ ಚಲಾಯಿಸಿದ್ದು ಜಾಥಾದ ವಿಶೇಷ ಆಕರ್ಷಣೆಯಾಗಿತ್ತು.


ಸಮಾರೋಪ ಸಮಾರಂಭ

ಸೈಕಲ್ ಜಾಥಾ ಸಮಾರೋಪ ಸಮಾರಂಭವು ಬಂಡಿಮಠ ಬಸ್ ನಿಲ್ದಾಣದಲ್ಲಿ ನಡೆಯಿತು.ಮುಖ್ಯ ಅತಿಥಿ  ರೋಟರಿ ಮಾಜಿ ಸಹಾಯಕ ಗವರ್ನರ್ ಡಾಕ್ಟರ್ ಗುರುರಾಜ್ ಭಟ್ಟ ಮಾತನಾಡಿ "ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆರೋಗ್ಯಕ್ಕಾಗಿ ನಿರ್ದಿಷ್ಟ ಸಮಯವನ್ನು ಮೀಸಲಿಡಬೇಕು ಆರೋಗ್ಯಕರ ವ್ಯಕ್ತಿಯಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ "ಎಂದು ಹೇಳಿದರು .  

ಕಾರ್ಯಕ್ರಮದಲ್ಲಿ ನಗರ ಠಾಣಾಧಿಕಾರಿ ಮಧು ಬಿ ಹಾಗೂ ಗ್ರಾಮಾಂತರ ಠಾಣಾಧಿಕಾರಿ ನಾಸಿರ್ ಹುಸೇನ್ , ಮಾಜಿ ಅಸಿಸ್ಟೆಂಟ್ ಗವರ್ನರ್ ಡಾ. ಗುರುರಾಜ್ ಭಟ್ ಹಾಗೂ ರೋಟರಿ ಆನ್ಸ್ ಕ್ಲಬ್ಬಿನ ಅಧ್ಯಕ್ಷೆಯಾದ ರಮಿತಾ ಶೈಲೆಂದ್ರ ರಾವ್ ಹಾಗೂ ಯುವವಾಹಿನಿಯ ಗಣೇಶ್ ಸಾಲ್ಯಾನ್ ಮತ್ತು ಸ್ವಚ್ಛ ಬಿಗ್ರೇಡ್ ತಂಡದ ರಾಜೇಂದ್ರ ಅಮೀನ್ ರೋಟ್ರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷರಾದ  ರಾಹುಲ್ ,ಉದ್ಯಮಿ  ರಜತ್ ಕಾಮತ್ ಅವರು ವೇದಿಕೆಯಲ್ಲಿ ಇದ್ದರು. ಕಾರ್ಯಕ್ರಮ ನಿರೂಪಣೆ ರೋ.ಇಕ್ಬಾಲ್ ಅಹಮದ್ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ವಚ್ಛ ಕಾರ್ಕಳ ಬಿಗ್ರೇಡ್ ಮತ್ತು ವಿನಾಯಕ ಫ್ರೆಂಡ್ಸ್ ಕಾರ್ಕಳ  ಸದಸ್ಯರು ರೋಟರಿ ಸಂಸ್ಥೆಯ ರೋ. ಶೈಲೆಂದ್ರ ರಾವ್, ರೋ. ಸುರೇಶ್ ನಾಯಕ್, ರೋ. ರೋಷನ್ ಹಾಗೂ ಯುವವಾಹಿನಿ ಘಟಕದ ಎಲ್ಲಾ ಸದಸ್ಯರು ರೋಟರಾಕ್ಟ್ ಮತ್ತು ಆನ್ಸ್ ಕ್ಲಬ್ಬಿನ ಕಾರ್ಯದರ್ಶಿಯವರು ಉಪಸ್ಥಿತರಿದ್ದರು.

 

 

ಜಾಹೀರಾತು

































Labels:

Post a comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget