ಪತ್ರ ಚಳುವಳಿ ಎಫೆಕ್ಟ್:ಕಾರ್ಯಕಾರಿ ಸಮಿತಿಯಿಂದ ವೀರಪ್ಪ ಮೊಯ್ಲಿ ಔಟ್-Times Of Karkala


 
ಪತ್ರ ಚಳುವಳಿ ನಂತರದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಪತ್ರದ ಮೂಲಕ ರಾಹುಲ್ ಗಾಂಧಿ ನಾಯಕತ್ವ ಪ್ರಶ್ನಿಸಿದ್ದ 23 ಮಂದಿ ಮುಖಂಡರ ನೇತೃತ್ವ ವಹಿಸಿದ್ದ ಕಾಂಗ್ರೆಸ್  ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಗುಲಾಮ್ ನಬಿ ಅಜಾದ್ ಅವರನ್ನು ಪಕ್ಷದ ರಾಷ್ತ್ರೀಯ ಕಾರ್ಯದರ್ಶಿ ಹುದ್ದೆಯಿಂದ ಕೈ ಬಿಡಲಾಗಿದೆ. 


ಹರಿಯಾಣ ಉಸ್ತುವಾರಿಯಾಗಿದ್ದ ಅಜಾದ್ ಬದಲಿಗೆ ವಿವೇಕ್ ಬನ್ಸಲ್ ಗೆ ಜವಾಬ್ದಾರಿ ವಹಿಸಲಾಗಿದೆ. ಆದರೆ ಕಾರ್ಯಕಾರಿ ಸಮಿತಿಯಲ್ಲಿ ಅಜಾದ್ ಅವರನ್ನು ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ. 
ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅನೇಕರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲಾಗಿದ್ದು, ಹಿಂದೊಮ್ಮೆ ಕಾಂಗ್ರೆಸ್ ವಿರುದ್ಧ ಬಂಡೆದ್ದು ಪಿ ಈ ಸಂಗ್ಮಾ ಜತೆ ನ್ಯಾಶಲಿಸ್ಟ್ ಕಾಂಗ್ರೆಸ್ ಪಕ್ಷ ಕಟ್ಟಿ ನಂತರ ಕಳೆದ ಚುನಾವಣೆ ವೇಳೆ ಪಕ್ಷಕ್ಕೆ ಹಿಂದಿರುಗಿದ ತಾರೀಖ್  ಅನ್ವರ್ ಗೆ ಡಬಲ್ ಹುದ್ದೆ ನೀಡಲಾಗಿದೆ. ಕೇಂದ್ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಅನ್ವರ್ ನನ್ನು ಕೇರಳ ಹಾಗೂ ಲಕ್ಷದ್ವೀಪ ಕ್ಕೆ ಸಂಬಂಧಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿಯೂ ನೇಮಕ ಮಾಡಲಾಗಿದೆ. 

ಹರಿಯಾಣದಲ್ಲಿ ಕಳೆದ ವಿಧಾನಸಭೆ ಹಾಗು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರೂ, ರಾಹುಲ್ ಆಪ್ತರಾಗಿದ್ದ ಸಂವಹನ ವಿಭಾಗದ ಮುಖ್ಯಸ್ಥರಾಗಿದ್ದ ರಣದೀಪ್ ಸಿಂಗ್ ಸುರ್ಜಿವಾಲರನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಿಸುವ ಜತೆಗೆ ಸೋನಿಯಾ ಗಾಂಧಿಯವರಿಗೆ ಸಲಹೆ ನೀಡುವ ಆರು ಸಮಿತಿಯ ಸದಸ್ಯರನ್ನಾಗಿಯೂ ನೇಮಕ ಮಾಡಲಾಗಿದೆ. 

೨೩ ಮಂದಿಯ ತಂಡದಲ್ಲಿ ಗುರುತಿಸಿಕೊಂಡವರಲ್ಲಿ ಮತ್ತೋರ್ವ ನಾಯಕ ಮುಖಾಲ್ ವಾಸ್ನಿಕ್ ಡಿಮೋಷನ್ನಿನಿಂದ ಪಾರಾಗಿದ್ದಾರೆ. ಅವರನ್ನು ಮಧ್ಯಪ್ರದೇಶ ಉಸ್ತುವಾರಿಯಾಗಿ ನೇಮಿಸುವುದರ ಜತೆಗೆ ಕಾರ್ಯಕಾರಿ ಸಮಿತಿ ಸದಸ್ಯತ್ವವನ್ನೂ ಮುಂದುವರಿಸಲಾಗಿದೆ. ಅಜಯ್ ಮಕೇನ್ ರಾಜಸ್ತಾನ ಉಸ್ತುವಾರಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. 

ರಾಹುಲ್ ನಾಯಕತ್ವದ ಬಗ್ಗೆ ಉತ್ತರ ಪದೇಶ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಟೀಕೆಗಳನ್ನು  ಮಾಡಿದ್ದರೂ ಅವರ ಸ್ಥಾನಮಾನಗಳಿಗೆ ಯಾವುದೇ ಚ್ಯುತಿ ಬಂದಿಲ್ಲ. ಪಶ್ಸಿಮಾ  ಬಂಗಾಲ, ಅಂಡಮಾನ್  ನಿಕೋಬಾರ್ ಉಸ್ತುವಾರಿಯನ್ನಾಗಿ ನೇಮಿಸುವುದರ ಜತೆಗೆ ಕಾರ್ಯಕಾರಿ ಸಮಿತಿಯಲ್ಲೂ ಅವರ ಸ್ತನ ಉಳಿಸಿಕೊಂಡಿದ್ದಾರೆ. ಪ್ರಿಯಾಂಕ ಗಾಂಧಿ ಉತ್ತರ ಪ್ರದೇಶದ ಪ್ರಧಾನ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ. ಹಾಗೆಯೇ ರಾಹುಲ್ ಆಪ್ತ ಮಣಿಕಂ ಟಾಗೋರ್  ತೆಲಂಗಾಣದ ಹೊಸ ಉಸ್ತುವಾಹಿಯಾಗಿ ನೇಮಕಗೊಳ್ಳಲಿದ್ದಾರೆ. 

ದಿಗ್ವಿಜಯ ಸಿಂಗ್ , ರಾಜೀವ್ ಶುಕ್ಲ, ಮಣಿಕಂ ಟಾಗೋರ್, ಪ್ರಮೋದ್ ತಿವಾರಿ, ಜೈರಾಮ್ ರಮೇಶ್, ಎಚ್  ಕೆ ಪಾಟೀಲ್, ಸಲ್ಮಾನ್ ಖುರ್ಷಿದ್, ಪವನ್ ಕುಮಾರ್ ಬನ್ಸಲ್, ದಿನೇಶ್ ಗುಂಡುರಾವ್, ಮನೀಶ್, ಕೂಲ್ ದೀಪ್ ನಾಗ್ರಕಾರ್ಯಕಾರಿ ಸಮಿತಿ ಸದಸ್ಯತ್ವ ಪಡೆದುಕೊಂಡ ಹೊಸಬರಾಗಿದ್ದಾರೆ.

ಹಿಂದೆ ಕಾರ್ಯಕಾರಿ ಸಮಿತಿಯಲ್ಲಿದ್ದ ವೀರಪ್ಪ ಮೊಯಿಲಿಯವರನ್ನು ಕೈ ಬಿಡಲಾಗಿದೆ. ಯಾವುದೇ ಹೊಸ ಜವಾಬ್ದಾರಿ ನೀಡಲಾಗಿಲ್ಲ. ಪತ್ರ ಬರೆದಿರುವ 23 ಮಂದಿಯಲ್ಲಿ ಅವರೂ ಒಬ್ಬರಾಗಿದ್ದಾರೆ. ಅಂಬಿಕಾ ಸೋನಿ, ಮೋತಿಲಾಲ್ ವೋಹ್ರಾ, ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಂದ ಕೈಬಿಡಲಾಗಿದೆ. ಆದರೆ ಸೋನಿಯಾ ಗಾಂಧಿಯವರ ಆರು ಮಂದಿ ಸಲಹಾ ಸಮಿತಿಯಲ್ಲಿ ಅಂಬಿಕಾ ಸೋನಿಗೂ ಸ್ಥಾನ ನೀಡಲಾಗಿದೆ.   

 

ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget