ಕಾರ್ಕಳ:ಎಪಿಎಂಸಿ ಸದಸ್ಯ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಬಿಜೆಪಿ ಸೇರ್ಪಡೆ-Times of karkala
ಕಾರ್ಕಳ:ಎಪಿಎಂಸಿ ಸದಸ್ಯ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಬಿಜೆಪಿ ಸೇರ್ಪಡೆ-Times of karkala

ಕಾರ್ಕಳ,ಸೆ.05:ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಹೆಚ್ಚಾಗುತ್ತಿದೆ.ಕಾರ್ಕಳ್ದಲ್ಲಂತೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವ ಪ್ರಮುಖರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಪ್ರಸ್ತುತ ಎ.ಪಿ.ಎಂ.ಸಿ ಸದ್ಯಸರಾದ ನಾರಾಯಣ ಸುವರ್ಣ ಹಾಗೂ ಮಾಜಿ ಈದು ಗ್ರಾಮ ಪಂಚಾಯಿತಿ ಸದ್ಯಸರಾದ ಮೋಹಿನಿ ಸುವರ್ಣ ರವರು ಇಂದು(ಸೆ.5) ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಕಳ ಶಾಸಕರ ಸಮ್ಮುಖದಲ್ಲಿ ವಿಕಾಸ ಕಚೇರಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಇವರನ್ನು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಈ ಸಂಧರ್ಭದಲ್ಲಿ ನವೀನ್ ನಾಯಕ್,ಅನಂತಕೃಷ್ಣ ಶೆಣೈ ಹಾಗೂ ಇನ್ನಿತರ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
Post a comment