ಹೆಬ್ರಿ:ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ-Times of karkala
ಹೆಬ್ರಿ,ಸೆ.05:ನೆಹರು ಯುವ ಕೇಂದ್ರ ಉಡುಪಿ ಮತ್ತು ಶಾಂತಿನಿಕೇತನ ಯುವ ವೃಂದ (ರಿ.) ಕುಡಿಬೈಲು ಕುಚ್ಚೂರು ಇದರ ಆಶ್ರಯದಲ್ಲಿ ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಪಿಟ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ನಿರಂತರವಾಗಿ ನಡೆಯಲಿರುವ ಫಿಟ್ ಇಂಡಿಯಾ ಸರಣಿ ಕಾರ್ಯಕ್ರಮಕ್ಕೆ ಸಂಘದ ಕಛೇರಿಯಲ್ಲಿ ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷರಾದ ರಾಜೇಶರವರು ಚಾಲನೆ ನೀಡಿದರು.
ಈ ಸಂಧರ್ಭ ಮಾತನಾಡಿದ ಅವರು "ಸಂಘ ಈಗಾಗಲೇ ಶಾಂತಿನಿಕೇತನ ನಲಿಕಲಿ ಯೋಜನೆಯ ಅಡಿಯಲ್ಲಿ ಮಕ್ಕಳು ಯೋಗದಲ್ಲಿ ತೊಡಗಿಕೊಂಡ್ಡಿದ್ದು ಮುಂದಿನ ದಿನಗಳಲ್ಲಿ ಸಂಘದ ಸದಸ್ಯರು , ಸದಸ್ಯರ ಮನೆಯವರು ಸಹಾ ಯೋಗದಲ್ಲಿ ತೊಡಗಿಕೊಂಡು ಉತ್ತಮ ಆರೋಗ್ಯವಂತ ನಿಮ್ಮದಾಗಿಸಿಕೊಳ್ಳಿ" ಎಂದು ಹೇಳಿದರು.
ಸಂಘದ ಯೋಜನಾಧಿಕಾರಿ ನರೇಂದ್ರ ನಿರೂಪಿಸಿ, ಕ್ರೀಡಾ ಕಾರ್ಯದರ್ಶಿಯಾದ ದಿಕ್ಷಿತ್ ನಾಯಕ್ ಸ್ವಾಗತಿಸಿ,ಚೇತನ್ ವಂದಿಸಿದರು.
Post a comment