ಬೆಂಗಳೂರು,ಸೆ 11 : ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಬಂಧಿತರಾದ ಸಿನಿಮಾ ನಟಿಯರಿಗೆ ಬಿಜೆಪಿ ಜತೆ ನಂಟಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಟಿ ರಾಗಿಣಿ ದ್ವಿವೇದಿ ಜತೆ ಹಾಗು ಸಿದ್ದರಾಮಯ್ಯ ಅವರು ನಟಿ ಸಂಜನಾ ಗಲ್ರಾಣಿ ಜತೆಗಿರುವ ಚಿತ್ರಗಳನ್ನು ಪೋಸ್ಟ್ ಮಾಡಿದೆ.
ಅಷ್ಟೇ ಅಲ್ಲದೆ, 'ಕಾಂಗ್ರೆಸ್ ವೃಥಾ ಆರೋಪ ಮಾಡಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ. ನಟನಟಿಯರು ಎಲ್ಲ ಪಕ್ಷದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದನ್ನೇ ಪಕ್ಷದ ಜತೆಗಿನ ಸಂಬಂಧ ಎಂದು ಬಿಂಬಿಸಿ ಆರೋಪಿಸುವುದು ಹಾಸ್ಯಾಸ್ಪದ' ಎಂದು ಬಿಜೆಪಿ ಕರ್ನಾಟಕ ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಿದೆ.
Post a comment