ನಲ್ಲೂರು ಸರಕಾರಿ ಶಾಲೆಯ ಶಿಕ್ಷಕರ ವಿಶೇಷ ಕಾರ್ಯಕ್ಕೆ ಶಿಕ್ಷಣ ಸಚಿವರ ಮೆಚ್ಚುಗೆ -Times of karkala
ಕಾರ್ಕಳ,ಸೆ03:ಮಕ್ಕಳಮನೆಯಲ್ಲೇ ಶಾಲೆಯ ವಾತಾವರಣ ಉಂಟುಮಾಡುತ್ತಿರುವ ಕಾರ್ಕಳ ತಾಲೂಕಿನ ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ವಿನೂತನ ಪ್ರಯತ್ನಕ್ಕೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಶಾಲೆಯ ಅಂಗಳದ ಮಾವಿನ ಮರಕ್ಕೆ ಮೈಕ್ ಕಟ್ಟಿ ಅದರ ಮೂಲಕ ಪ್ರಾರ್ಥನೆ, ನಾಡಗೀತೆ ಪ್ರಸಾರ ಮಾಡುತ್ತಿದ್ದರು. ಶಾಲೆಯ ಸುತ್ತ 2 ಕಿ. ಮೀ ವ್ಯಾಪ್ತಿಗೆ ಇದು ಕೇಳಿಸುತ್ತಿತ್ತು. ಶಾಲೆಯ ಸಮಯಕ್ಕೆ ಮಕ್ಕಳು ಸಮವಸ್ತ್ರ ಗುರುತಿನ ಚೀಟಿ ಧರಿಸಿ ಶಾಲೆಗೆ ಹೊರಡುವಂತೆ ಹೊರಟು ಮನೆಯಲ್ಲಿ ಸಿದ್ಧರಾಗುತ್ತಿದ್ದರು. ಬಳಿಕ ವಠಾರಗಳಲ್ಲಿ ನಡೆಯುವ ವಿದ್ಯಾಗಮ ಶೈಕ್ಷಣಿಕ ಚಟುವಟಿಕೆ ವಠಾರಗಳಲ್ಲಿ ನಡೆಯುತ್ತಿತ್ತು.
ಬುಧವಾರ ಶಾಲೆಯ ಮುಖ್ಯ ಶಿಕ್ಷಕರ ಮೊಬೈಲ್ ಗೆ ಕರೆ ಮಾಡಿರುವ ಸುರೇಶ್ ಕುಮಾರ್, ವೃತ್ತಿ ಹಾಗು ಕನ್ನಡ ಶಾಲೆಯ ಮೇಲೆ ಶಿಕ್ಷಕರಾದ ನಿಮಗಿರುವ ಪ್ರೀತಿ ಹಾಗು ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದರು.
ಅಲ್ಲದೆ ಸಹಶಿಕ್ಷಕರ ಜತೆಗೂ ಮಾತನಾಡಿದರು. ಅವರೆಲ್ಲರ ಕ್ಷೇಮ ಸಮಾಚಾರ ವಿಚಾರಿಸಿ ಶಿಕ್ಷಕರ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು. ಮಕ್ಕಳು, ಶಿಕ್ಷಕರ ಜತೆ ಅರ್ಧ ತಾಸು ಮಾತನಾಡಿದರು.
Post a comment