ಹೆಬ್ರಿ:ಶಾಂತಿನಿಕೇತನ ಯುವ ವೃಂದದ ವತಿಯಿಂದ ಗುರುವಂದನೆ ಕಾರ್ಯಕ್ರಮ-Times of karkala

ಹೆಬ್ರಿ,ಸೆ.06:ನಿರಂತರ ಸಮಜಮುಖಿ ಕೆಲಸಗಳಿಂದ ಜನಮನ್ನಣೆ ಗಳಿಸುತ್ತಿರುವ ಶಾಂತಿನಿಕೇತನ  ಯುವ ವೃಂದ ಕುಡಿಬೈಲು ಕುಚ್ಚೂರು ಮತ್ತು ಚಾಣಕ್ಯ ಎಜುಕೇಶನ್ ಅಕಾಡೆಮಿ ಹೆಬ್ರಿ ಇವರ ಜಂಟಿ ಆಶ್ರಯದಲ್ಲಿ  ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನೆ ಕಾರ್ಯಕ್ರಮ ನಡೆಯಿತು.

ವಿಶೇಷ ವ್ಯಕ್ತಿತ್ವ ಮಕ್ಕಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸಿಕೊಟ್ಟು ಶಿಕ್ಷಕರಲ್ಲಿ ಮಾದರಿಯಾದ ಶ್ರೀ ರಮಾನಂದ ಶೆಟ್ಟಿಯವರನ್ನು ಈ ವರ್ಷದ ಆದರ್ಶ ಶಿಕ್ಷಕ ಎಂದು ಗುರುತಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಾಂಶುಪಾಲೆ ವೀಣಾ ಯು ಶೆಟ್ಟಿ ಮಕ್ಕಳು ಅಂಕಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತವಾಗದೆ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಾಣಕ್ಯ ಅಕಾಡೆಮಿಯ ಶ್ರೀ ಉದಯಕುಮಾರ್ ಶೆಟ್ಟಿ ಅವರು ಚಾಣಕ್ಯ ಅಕಾಡೆಮಿ ಮತ್ತು ಶಾಂತಿನಿಕೇತನ ಯುವ ವೃಂದ ವಿಶಿಷ್ಟ ಆಲೋಚನೆಗಳ ಮೂಲಕ ವಿಶಿಷ್ಟ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದನ್ನು ಶ್ಲಾಘಿಸಿದರು.ಶಾಂತಿನಿಕೇತನದ ಅಧ್ಯಕ್ಷರಾದ ರಾಜೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು 

ಬಹುಮಾನ ವಿತರಣೆ: 

ಇದೆ ಸಂದರ್ಭದಲ್ಲಿ ನನ್ನ ನೆಚ್ಚಿನ ಶಿಕ್ಷಕ ನ ಬಗ್ಗೆ ಲೇಖನ ವಿಜೇತರಿಗೆ ಬಹುಮಾನ ನೀಡಲಾಯಿತು.

ಸೀನಿಯರ್ ಭಾಗದಲ್ಲಿ ರೇಷ್ಮಾ ಕಡ್ತಲದ ಪ್ರಥಮ , ರಶ್ಮಿ ತುಮಕೂರು ದ್ವಿತೀಯ ಬಹುಮಾನ ಹಾಗೂ ಮಕ್ಕಳ ವಿಭಾಗದಲ್ಲಿ ಸೌಜನ್ಯ ಪ್ರಥಮ, ಚೇತನ್ ದ್ವಿತೀಯ ಬಹುಮಾನ ಪಡೆದರು... ಭಾಗವಹಿಸಿದ ಎಲ್ಲರಿಗೂ ಸಮಾಧನಕರ ಬಹುಮಾನ ನೀಡಲಾಯಿತು.

ಸಂಘದ ಸದಸ್ಯರಾದ ವಿಷ್ಣುದರಣ್ ಸ್ವಾಗತಿಸಿ, ನರೇಂದ್ರ ವಂದಿಸಿದರು.

 

ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget