ರಾಜ್ಯಮಟ್ಟದ ಪ್ರತಿಷ್ಠಿತ ಪರಿವರ್ತನಾ ಪ್ರಶಸ್ತಿಗೆ ಆಯ್ಕೆಯಾದ ಬಿರುವೆರ್ ಕುಡ್ಲ ಸಂಘದ ಸ್ಥಾಪಕ ಅಧ್ಯಕ್ಷರಾದ ಉದಯ್ ಪೂಜಾರಿ-Times of karkala
ಮಂಗಳೂರು,ಸೆ.04:ಬಿರುವೆರ್ ಕುಡ್ಲ ಸಂಘದ ಸ್ಥಾಪಕ ಅಧ್ಯಕ್ಷರಾದ ಉದಯ್ ಪೂಜಾರಿ ಅವರು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ (ಬಿಎಸ್ಎನ್ಡಿಪಿ) ಸಂಘಟನೆ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಪ್ರತಿಷ್ಠಿತ ಪರಿವರ್ತನಾ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2019 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಉದಯ ಪೂಜಾರಿ ಅವರು, ಬಿರುವೆರ್ ಕುಡ್ಲ ಸಂಸ್ಥಾಪಕರಾಗಿದ್ದಾರೆ.
ಕರಾವಳಿ, ಬೆಂಗಳೂರು, ಮುಂಬೈ ಮಹಾನಗರ ಹಾಗೂ ದುಬೈ ನಗರದಲ್ಲಿಯೂ ಹೆಸರುವಾಸಿಯಾಗಿರುವ ಬಿರುವೆರ್ ಕುಡ್ಲದ ಸದಸ್ಯರು ಉದಯ್ ಪೂಜಾರಿ ಅವರು ಈ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
Post a comment