ಬೋಳ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಬಾಬು ನಲಿಕೆ ನಿಧನ-Times Of Karkala

ಕಾರ್ಕಳ,ಸೆ.06:ತುಳುನಾಡಿನ  ಪ್ರಮುಖ ದೈವಗಳಿಗೆ ಗಗ್ಗರ ಸೇವೆ ಕೊಡುತ್ತಿದ್ದ  ಹಿರಿಯ ದೈವ ನರ್ತಕರಾದ ಬೋಳ ಬಾಬು ನಲಿಕೆ  ಶನಿವಾರದಂದು ನಿಧನರಾಗಿದ್ದಾರೆ. ಕಾರ್ಕಳ ತಾಲೂಕಿನ ಬೋಳ ಗ್ರಾಮದ ಬರಬೈಲು ನಿವಾಸಿಯಾಗಿದ್ದ  ಬಾಬು ನಲಿಕೆ  ಅವರಿಗೆ 84 ವರ್ಷ ವಯಸ್ಸಾಗಿತ್ತು. 


ತಲೆತಲಾಂತರದಿಂದ ಬಂದಿದ್ದ ಗಗ್ಗರ ಸೇವೆಯ ಕಸುಬನ್ನು ಬಹಳ ಹುಮ್ಮಸ್ಸಿನಿಂದ ಮಾಡುತ್ತಿದ್ದ ಬಾಬು ನಲಿಕೆ  ಬದುಕಿದ್ದಷ್ಟೂ ಕಾಲ ಬಹಳ ಭಕ್ತಿ ಶ್ರದ್ದೆಯಿಂದ ದೈವದ ಸೇವೆ ಮಾಡಿದವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಇವರು ಬೋಳದ ದುಗ್ಗ ನಲಿಕೆ ಹಾಗು ಶೇಷಿ  ನಲಿಕೆ ದಂಪತಿಗಳ ಆರು ಮಕ್ಕಳಲ್ಲಿ ನಾಲ್ಕನೆಯವರು. 

ಮೂಲ  ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ದೈವಗಳ ಸೇವಾ ಕೈಂಕರ್ಯದಲ್ಲಿ ತೊಡಗಿದ್ದ ಬಾಬು ನಲಿಕೆ , ಆಧುನಿಕತೆಯಿಂದಾಗಿ ಸಂಪ್ರದಾಯಕ್ಕೆ ಹೊಡೆತ ಬೀಳುತ್ತಿರುವುದರ ಬಗ್ಗೆ ಬಹಳಷ್ಟು ವಿಷಾದ ಹೊಂದಿದ್ದರು. ಇಂದಿನ ಯುವ ಜನರಲ್ಲಿ ಭಕ್ತಿ ಶ್ರದ್ಧೆಗಳು ಕಡಿಮೆಯಾಗುತ್ತಿರುವುದರ ಬಗ್ಗೆಯೂ ಅವರಲ್ಲಿ ಅಸಮಾಧಾನವಿತ್ತು. ಬದಲಾವಣೆಯ ಗಾಳಿ ಬಿಸುತ್ತಿರುವುದು ನಿಜವೇ ಆಗಿದ್ದರೂ, ಕಿರಿಯ ಕಲಾವಿದರು ಸಂಪ್ರದಾಯ ಅರಿತು ಹೆಜ್ಜೆಯಿಡಬೇಕು ಎಂಬ ನಿಲುವು ಅವರದಾಗಿತ್ತು. 

ಕಲೆ ಕಲಾವಿದರಿಗಷ್ಟೇ ಒಲಿದು ಬರುತ್ತದೆ. ದೈವ ನರ್ತನ ಕಲೆ ಎಲ್ಲರಿಗೂ ಸಿದ್ಧಿಸದು. ಅದು ವಂಶಪಾರಂಪರ್ಯವಾಗಿ ಅನುಕರಣೆಯಾಗುತ್ತ ಬಂದಿರುವ ಕಲೆ ಎಂಬ ಅಭಿಪ್ರಾಯ ಹೊಂದಿದ್ದರು  ಬಾಬು ನಲಿಕೆ. 

 

ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget