ಕಾರ್ಕಳದಲ್ಲಿ ಕಾಂಗ್ರೆಸ್‌ ಮತ್ತೆ ಸದೃಡವಾಗಬೇಕು:ಹರ್ಷ ಮೊಯಿಲಿ-Times Of Karkala

ಹೆಬ್ರಿ, ಸೆ.20: ಕಾರ್ಕಳ ಕ್ಷೇತ್ರದಲ್ಲಿ ಅಂದು ಸಾಕಷ್ಟು ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ವೀರಪ್ಪ ಮೊಯಿಲಿ ಮತ್ತು ಗೋಪಾಲ ಭಂಡಾರಿ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಯೋಜನೆ, ಸವಲತ್ತುಗಳನ್ನು ಪ್ರತಿ ಮನೆಗೂ ತಲುಪಿಸುವ ಕೆಲಸವನ್ನು ಮಾಡಲಾಗಿತ್ತು. ಪ್ರತಿ ಮನೆಯಲ್ಲೂ ಕಾಂಗ್ರೆಸ್‌ ಕೊಡುಗೆ, ಅಂದು ಕಾಂಗ್ರೆಸ್‌ ವೈಭವ ಇತ್ತು. ಇನ್ನು ಮುಂದೆ ಕೂಡ ನಾವೆಲ್ಲ ಒಂದಾಗಿ ಆ ವೈಭವವನ್ನು ಕಾಣಬೇಕಾಗಿದೆ. ನಾಯಕರು,ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಚೈತನ್ಯ ತುಂಬಿಸಿ ಸದೃಡವಾಗಿ  ಪಕ್ಷವನ್ನು  ಒಗ್ಗೊಡಿಸಬೇಕು  ಎಂದು ಕಾಂಗ್ರೆಸ್‌ ನಾಯಕ ಹರ್ಷ ಮೊಯಿಲಿ ಹೇಳಿದರು.

ಅವರು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಮತ್ತು ಮುದ್ರಾಡಿ ಕಾಂಗ್ರೆಸ್‌ ಸಮಿತಿ ವತಿಯಿಂದ ಭಾನುವಾರ ಹೆಬ್ರಿಯಲ್ಲಿ ನಡೆದ " ಗ್ರಾಮದಲ್ಲೊಂದು ದಿನ " ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಂಗ್ರೆಸ್‌ ಪ್ರಮುಖರಾದ ಹೆಬ್ರಿಯ ಶೀನಾ ಪೂಜಾರಿ,  ಶಿವರಾಮ ಪೂಜಾರಿ ನಾಡ್ಪಾಲು,ಸಾಧು ಮಡಿವಾಳ ಹೆಬ್ರಿ , ಅಪ್ಪು ಸೇರಿಗಾರ್ ಮುದ್ರಾಡಿ , ರಾಜು ಮೇಸ್ರಿ ಮುದ್ರಾಡಿ ಅವರನ್ನು  ಸನ್ಮಾನಿಸಲಾಯಿತು 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ,ಕೆ.ಪಿ.ಸಿ.ಸಿ ಉಸ್ತುವಾರಿಗಳಾದ ಉಮ್ಮರ್ ಫಾರೂಖ್ ,ಭರತ್ ಮುಂಡೋಡಿ, ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರವಿಶಂಕರ್ ಶೇರಿಗಾರ್, ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿ ಉದಯ.ವಿ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಸುಧಾಕರ್ ಕೋಟ್ಯಾನ್ ,ನೀರೆ ಕೃಷ್ಣ ಶೆಟ್ಟಿ ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಆಚಾರ್ಯ ಐ.ಟಿ ಸೆಲ್ ಅಧ್ಯಕ್ಷ ಸಂತೋಷ್ ನಾಯಕ್‌ ಕನ್ಯಾನ , ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯ ದರ್ಶಿ  ಎಚ್. ಜನಾರ್ಧನ್‌, ಮುದ್ರಾಡಿ ಕಾಂಗ್ರೆಸ್‌ ಸಮಿತಿ ಪ್ರಮುಖರು, ಹೆಬ್ರಿ ಮತ್ತು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ನಾಯಕರು, ಪ್ರಮುಖರು, ಮುಖಂಡರು ಉಪಸ್ಥಿರಿದ್ದರು. ಚೈತ್ರ  ಕಬ್ಬಿನಾಲೆ ನಿರೂಪಿಸಿದರು.

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget