ಉಡುಪಿ: ನೇಕಾರರ ನೆರವಿಗೆ ತಕ್ಷಣ ಧಾವಿಸಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ-Times Of Karkala

ಉಡುಪಿ,ಸೆ, 21: ಮಳೆಯಿಂದಾಗಿ ನೇಯ್ಗೆ ಯಂತ್ರಗಳು ಹಾಳಾಗಿ ತೊಂದರೆ ಅನುಭವಿಸಿದ ಉಡುಪಿಯ ನೇಕಾರರಾದ ಲಕ್ಷ್ಮಣ ಶೆಟ್ಟಿಗಾರ್ ದಂಪತಿಗಳ ನೆರವಿಗೆ ತಕ್ಷಣ ಧಾವಿಸಿದ ಬಿಜೆಪಿ ಯುವ ಮೋರ್ಚಾ ಸದಸ್ಯರು  ಸಂಕಷ್ಟದಲ್ಲಿದ್ದವರಿಗೆ ಆರ್ಥಿಕ ನೆರವು ನೀಡಿದರು.
 

ಯಕ್ಷಗಾನಕ್ಕೆ ಬಳಸುವ ಚಂದದ ಸೀರೆಗಳನ್ನು ನೇಯ್ಗೆ  ಕಾಯಕದಲ್ಲಿ ತೊಡಗಿಸಿಕೊಂಡಿರುವ ಕೆಲವೇ ಕೆಲವು ನೇಕಾರರಲ್ಲಿ ಉಡುಪಿಯ ಲಕ್ಷ್ಮಣ ಶೆಟ್ಟಿಗಾರ್ ಮತ್ತು ಅವರ ಪತ್ನಿ ಕೂಡ ಒಬ್ಬರು. ನಿನ್ನೆ ಸುರಿದ ಬಾರಿ ಮಳೆಗೆ ಅವರ ಯಂತ್ರಗಳು ಹಾಳಾಗುವ ಸ್ಥಿತಿಯಲ್ಲಿದ್ದು ಅವುಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು. 

ಇದನ್ನು ಅರಿತ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷರಾಗಿರುವ ಡಾ ಸಂದೀಪ್, ಜಿಲ್ಲಾ  ಅಧ್ಯಕ್ಷರಾಗಿರುವ ವಿಖ್ಯಾತ್ ಶೆಟ್ಟಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ತಕ್ಷಣ ಸ್ಪಂದಿಸಿದ ಬಿಜೆಪಿ ಉಡುಪಿ ಜಿಲ್ಲಾ ಯುವಮೋರ್ಚಾ ತಂಡ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯಧನ ನೀಡಿತು.ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ಪ್ರದಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ, ಅಕ್ಷಿತ್ ಶೆಟ್ಟಿ ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ವೀಣಾ ಶೆಟ್ಟಿ ಯುವಮೋರ್ಚಾ ಉಪಾಧ್ಯಕ್ಷ ಸುಮಿತ್ ಮಡಿವಾಳ, ಕಾರ್ಯದರ್ಶಿ ಪ್ರವೀಣ್ ಪೂಜಾರಿ, ಅಭಿರಾಜ್ ಸುವರ್ಣ ಮತ್ತಿತರ ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ಧರು.

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget