ಅಜೆಕಾರು:ಹಿರಿಯರ ಉತ್ಸಾಹ ಅನುಕರಣೀಯ: ಗೋಪಿನಾಥ ಭಟ್-Times Of Karkala

ಅಜೆಕಾರು, ಸೆ,13: ಹಿರಿಯರನ್ನು ನೆನಪಿಸಿಕೊಳ್ಳುವ 'ಹಿರಿಯರೆಡೆಗೆ ನಡಿಗೆ' ಉತ್ತಮ ಕಾರ್ಯಕ್ರಮ. ನಮ್ಮ ಮಕ್ಕಳನ್ನು ಸಮಾಜದ ಮತ್ತು ನಮ್ಮ ಸಂಪತ್ತಾಗಿ ರೂಪಿಸುವ ಶಿಕ್ಷಕರ ಸೇವೆ ಅಮೂಲ್ಯವಾದುದು. 80 ರ ಹರೆಯದಲ್ಲೂ ಮೌರೀಸ್ ಅವರ ಉತ್ಸಾಹ ಅನುಕರಣೀಯ ಎಂದು ಯುವ ಉದ್ಯಮಿ, ಸಮಾಜ ಸೇವಾಸಕ್ತ ಗೋಪಿನಾಥ ಭಟ್ ಮುನಿಯಾಲು ಹೇಳಿದರು.
ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ, ಆದಿಗ್ರಾಮೋತ್ಸವ ಸಮಿತಿಯ ಸಹಕಾರದೊಂದಿಗೆ ಆಯೋಜಿಸಿದ್ದ ’ಹಿರಿಯರೆಡೆಗೆ ನಮ್ಮ ನಡಿಗೆ’ ಶಿಕ್ಷಕರಿಗೆ ಗೌರವ ಕಾರ್ಯಕ್ರಮದಲ್ಲಿ ವಿಶ್ರಾಂತ ಮುಖ್ಯೋಪಾಧ್ಯಾಯ ಮೌರೀಸ್ ತಾವ್ರೋ ಅವರನ್ನು ಗೌರವಿಸಿ ಮಾತನಾಡುತ್ತಿದ್ದರು. ಅವರ ಪತ್ನಿ ಲಿಲ್ಲಿ ತಾವ್ರೋ ಅವರನ್ನೂ ಗೌರವಿಸಲಾಯಿತು.
ಶಾಲೆಯಲ್ಲಿ ಬೆತ್ತವನ್ನು ಶಿಕ್ಷಕರ ಕೊಠಡಿಯಲ್ಲಿಡಿ. ಅಗತ್ಯ ಬಿದ್ದರೆ ಮಾತ್ರ ತರಗತಿಯಿಂದ ಹೋಗಿ ತನ್ನಿ ಎಂಬ ಸೂತ್ರವನ್ನು ೪೦ ವರ್ಷದ ಮೊದಲು ನಮ್ಮ ಶಾಲೆಯಲ್ಲಿ ಪ್ರಯೋಗಕ್ಕೆ ತಂದಿದ್ದೆವು. ಅದು ಆಗ ಪರಿಣಾಮಕಾರಿಯಾಗಿತ್ತು. ವಿದ್ಯಾರ್ಥಿಗಳೇ ನಮ್ಮ ಸಂಪತ್ತು ಎಂದು  
ಗೌರವ ಸ್ವೀಕರಿಸಿದ  ಮೌರೀಸ್ ತಾವ್ರೋ ಅವರು  ಹೇಳಿದರು.
ಸಮಿತಿಯ ರಾಜ್ಯಾಧ್ಯಕ್ಷ, ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು ಅವರು ಅಧ್ಯಕ್ಷತೆ ವಹಿಸಿ ಹಿರಿಯರ ಸಂತೋಷ ಮತ್ತು ಉತ್ತಮ ಪ್ರತಿಕ್ರಿಯೆ ಸಂತೋಷ ತಂದಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಸರಣಿ ಕಾರ್ಯಕ್ರಮವಾಗಿ ಸಮಿತಿ ಗೌರವಿಸಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಎ.ಶಾಂತಿರಾಜ ಹೆಗ್ಡೆ, ಮಕರಂದ ಎಸ್.ಹೆಗ್ಡೆ, ವ್ಯಾಪಾರೋದ್ಯಮಿ-ಕವಿ ಬಾಲಕೃಷ್ಣ ಹೆಗ್ಡೆ ಅಜೆಕಾರು, ಸಾಹಿತಿ ಪ್ರೇಮಾ.ವಿ.ಸೂರಿಗ, ಕುರ್ಸುಕಟ್ಟೆ ಅಂಗನವಾಡಿ ಶಿಕ್ಷಕಿ ಶಕುಂತಳ ಅತಿಥಿಗಳಾಗಿದ್ದರು.
ಸಮಿತಿಯ ಸದಸ್ಯ ಸಂತೋಷ್ ಜೈನ್ ಎಣ್ಣೆಹೊಳೆ, ಡ್ಯಾರೆಲ್ ಅಲ್ಮೇಡಾ, ಸುನಿಜ, ಸುನಿಧಿ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು ಅವರು ವಂದಿಸಿದರು.

 

ಜಾಹೀರಾತು
Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget