ಕಾರ್ಕಳ,ಸೆ.07: ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಗಣಿತ ನಗರ ಇಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪಳ್ಳಿಯ ಪ್ರಾಂಶುಪಾಲ ಶ್ರೀ ಪಿ. ವಸಂತ ಆಚಾರ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಎಪಿಜಿಇಟಿಯ ಟ್ರಸ್ಟಿಗಳಾದ ಕರುಣಾಕರ ಶೆಟ್ಟಿ, ಶ್ರೀಮತಿ ವಿದ್ಯಾ ಸುಧಾಕರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಡಾ. ಪ್ರಕಾಶ್ ಶೆಣೈ, ಶ್ರೀ ಅನಿಲ್ ಕುಮಾರ್ ಜೈನ್, ಸಂಸ್ಥೆಯ ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ದೇವೇಂದ್ರ ನಾಯಕ್, ಸುಕುಮಾರ ಶೆಟ್ಟಿ, ಉಭಯ ಸಂಸ್ಥೆಗಳ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರ್, ಶ್ರೀಮತಿ ಉಷಾ ರಾವ್ ಯು, ವೈಸ್ ಪ್ರಿನ್ಸಿಪಾಲರುಗಳಾದ ಸಾಹಿತ್ಯ ಹಾಗೂ ಶ್ರೀಮತಿ ವಾಣಿ ಜಯಶೀಲ್, ಪಿ.ಆರ್.ಓ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಿಥುನ್ ಯು ಉಪಸ್ಥಿತರಿದ್ದರು.
Post a comment