ಕಾರ್ಕಳ:ಟಿಪ್ಪರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಪಳ್ಳಿ ಗ್ರಾಮದ ಕೃಷ್ಣ ಸಭಾಭವನದ ಬಳಿ ಹಾದು ಹೋಗುವ ಕಲ್ಯಾ ಕುಂಜಾರುಗಿರಿ ಸಾರ್ವಜನಿಕ ರಸ್ತೆಯ ಬಳಿ ನಡೆದಿದೆ.ಕಲ್ಯಾ ನಿವಾಸಿ ಯಶೋಧರ (47) ಎಂಬುವವರು ಗಂಭೀರ ಗಾಯಗೊಂಡವರು.
ಉಡುಪಿಯಿಂದ ಪಳ್ಳಿ ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ಚಾಲಕನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು. ಈ ಸಂಧರ್ಭ ಬೈಕ್ ಸವಾರ ಯಶೋಧರ ಗಂಭೀರ ಗಾಯಗೊಂಡಿದ್ದಾರೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a comment