ಶಾಂತಿನಿಕೇತನ ಯುವ ವೃಂದ ವತಿಯಿಂದ ನಲಿಕಲಿ ಪ್ರಗತಿ ಪರಿಶೀಲನೆ ಸಭೆ ಮತ್ತು ಉಚಿತ ಪುಸ್ತಕ ವಿತರಣೆ-Times of karkala
ಶಾಂತಿನಿಕೇತನ ಯುವ ವೃಂದ ಕುಡಿಬೈಲು ಕುಚ್ಚೂರು ಬೆಳ್ವೆ ಅಲ್ಬಾಡಿ ಘಟಕದ ವತಿಯಿಂದ ಶಾಂತಿನಿಕೇತನ ನಲಿಕಲಿ ಪ್ರಗತಿ ಪರಿಶೀಲನೆ ಸಭೆ ಮತ್ತು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಆರ್ಡಿಯ ಗಂಟುಬೀಳಿನಲ್ಲಿ ನಡೆಯಿತು
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಗುಲಾಬಿ ಯವರು ಮಾತನಾಡಿ ಶಾಂತಿನಿಕೇತನ ಯುವ ವೃಂದ ಕಾರ್ಯಕ್ರಮವನ್ನು ಶ್ಲಾಘಿಸಿದರು..
ಸಂಘದ ಅಧ್ಯಕ್ಷರಾದ ರಾಜೇಶ್ ಮಾತನಾಡಿ"ಶಾಂತಿನಿಕೇತನ ಸಂಘ ಒಂದಲ್ಲ ಒಂದು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದೆ.ಈ ಕೋವಿಡ್ ನ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಯಿಂದ ದೂರ ಇರಬಾರದು ಎನ್ನುವ ಕಾರಣದಿಂದ ಈ ಹಿಂದೆ ನಾವು ಶಾಂತಿನಿಕೇತನ ನಲಿಕಲಿ ಯೋಜನೆಯನ್ನು ಆರಂಭಿಸಿದ್ದು ಮಕ್ಕಳು ಕನಿಷ್ಠ ಎರಡರಿಂದ ಮೂರು ಗಂಟೆ ಕಾಲ ಕಲಿಕಾ ಚಟುವಟಿಕೆ ತೊಡಗಿಕೊಳ್ಳುವಂತೆ ಮಾಡುವುದು ಇದರ ಮುಖ್ಯ ಉದ್ದೇಶ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದ್ದು ಈ ನಿಟ್ಟಿನಲ್ಲಿ ಇಲ್ಲಿನ ನಲಿ-ಕಲಿ ಚಟುವಟಿಕೆಗಳಿಗೆ ಉಚಿತವಾಗಿ ಪುಸ್ತಕವನ್ನು ವಿತರಣೆ ಮಾಡಿ ಅವರಿಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ" ಎಂದು ಹೇಳಿದರು.
ಉಚಿತವಾಗಿ ಪಾಠವನ್ನು ಹೇಳಿಕೊಳ್ಳುತ್ತಿರುವ ಸಂಘದ ಸದಸ್ಯರಾದ ಪ್ರಶಾಂತ್ ಉಷಾ ರೇಷ್ಮಾ ಅವರನ್ನು ಅಭಿನಂದಿಸಲಾಯಿತು
32 ವಿದ್ಯಾರ್ಥಿಗಳಿಗೆ ಶಾಂತಿನಿಕೇತನ ಸೌಹಾರ್ದ ಸಹಕಾರಿ ನಿಯಮಿತ ಇದರ ಪ್ರಾಯೋಜಕತ್ವದಲ್ಲಿ ಉಚಿತವಾಗಿ ನೋಟ್ ಬುಕ್ ಗಳನ್ನು ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರವೀಶ್ ಪ್ರಧಾನ ಕಾರ್ಯದರ್ಶಿಯಾದ ಜಯಕರ್ ಸಂಘಟನ ಕಾರ್ಯದರ್ಶಿಯಾದ ಗಣೇಶ್ ಬೆಳ್ವೆ ಅಲ್ಬಾಡಿ ಘಟಕದ ಸಂಯೋಜಕರಾದ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು
ವಿಷ್ಣುಧರನ್ ನಿರೂಪಿಸಿ, ಉಷಾ ಸ್ವಾಗತಿಸಿ , ಪ್ರಶಾಂತ್ ವಂದಿಸಿದರು.
Post a comment