ಹೆಬ್ರಿ:ಹೆಬ್ರಿಯ ಹೆಬ್ರಾಯ್, ಸಿಟಿ ಲಯನ್ಸ್ ಕ್ಲಬ್ ವತಿಯಿಂದ ಹೆಬ್ರಿ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಭಾನುವಾರ ವಿಶ್ವ ಹೃದಯದಿನದ ಪ್ರಯುಕ್ತ ಹೆಬ್ರಿಯ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥಾ ನಡೆಯಿತು.
ಹೆಬ್ರಿ ಠಾಣೆಯ ಸಬ್ ಇನ್ಸ್ಫೆಕ್ಟರ್ ಸುಮಾ.ಬಿ ಜಾಥಾಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಹೆಬ್ರಾಯಸ್ ಸಂಸ್ಥೆಯ ಸಂಸ್ಥಾಪಕ ಸೀತಾನದಿ ವಿಠ್ಠಲ ಶೆಟ್ಟಿ, ಅಧ್ಯಕ್ಷ ನವೀನ್ ಸೋಮಯಾಜಿ, ಪ್ರಧಾನ ಕಾಯðದಶಿð ದಿನಕರ ಪ್ರಭು, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಭಾಗðವಿ ಆರ್. ಐತಾಳ್, ಹೆಬ್ರಿ ರಾಘವೇಂದ್ರ ಜನರಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ರಾಮಚಂದ್ರ ಐತಾಳ್, ಹೆಬ್ರಿ ಜೇಸಿಐ ಅಧ್ಯಕ್ಷೆ ಸುನೀತಾ ಅರುಣ್ ಕುಮಾರ್ ಹೆಗ್ಡೆ, ಲಯನ್ಸ್ ಕ್ಲಬ್ ಮತ್ತು ಹೆಬ್ರಾಯ್ ಸಂಸ್ಥೆಯ ಸದಸ್ಯರು ಇದ್ದರು.
Post a comment