ಬೆಂಗಳೂರು, ಸೆ,12 :ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದ ಆರೋಪಿ ಬಂಧಿತ ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ಆರೋಪಿ ವೈಭವ್ ಜೈನ್ನನ್ನು ವೈಯ್ಯಾಲಿಕಾವಲ್ನ ಆತನ ನಿವಾಸದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತನಗೆ ಕೊರೊನಾ ಬಂದಿದೆ ಹೋಮ್ ಐಸೋಲೇಷನ್ನಲ್ಲಿ ಇದ್ದೇನೆ ಎಂದು ವೈಭವ್ ಜೈನ್ ಈ ಮೊದಲು ತಿಳಿಸಿದ್ದ. ಹೀಗಾಗಿ ಈತನ ಬಂಧನ ತಡವಾಗಿ ನಡೆದಿದೆ.

ವೈಭವ್ ಜೈನ್ ಪ್ರಕರಣದ ಐದನೇ ಆರೋಪಿಯಾಗಿದ್ದು, ಪ್ರತಿಷ್ಠಿತ ಚಿನ್ನದ ವ್ಯಾಪಾರಿಯ ಪುತ್ರನಾಗಿರುವ ಈತ ಕೂಡ ಚಿನ್ನದ ವ್ಯವಹಾರ ನಡೆಸುತ್ತಿದ್ದಾನೆ.
ವೈಭವ್ ಪಾರ್ಟಿಗೆ ಬಂದವರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನಂತೆ. ಆದರೆ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಸದ್ದು ಮಾಡುತ್ತಿದ್ದಂತೆ ವೈಭವ್ ಕೊರೊನಾ ಪಾಸಿಟಿವ್ ಎಂದು ಹೇಳಿಕೊಂಡು ಹೋಮ್ ಐಸೋಲೇಷನ್ನಲ್ಲಿದ್ದನು.
2018ರಲ್ಲಿ ರವಿಶಂಕರ್ ಹಾಗೂ ರಾಗಿಣಿ ಪ್ರತಿಷ್ಠಿತ ಹೋಟೆಲ್ನಲ್ಲಿ ಪಾರ್ಟಿಗೆ ಹೋಗಿದ್ದರು. ಅಲ್ಲಿ ರವಿಶಂಕರ್ಗೆ ವೈಭವ್ ಜೈನ್ ಪರಿಚಯವಾಗಿದ್ದ. ಸ್ನೇಹ-ಸಲುಗೆ ಜಾಸ್ತಿ ಆಗುತ್ತಿದ್ದಂತೆ ವೈಭವ್ ಜೈನ್ ವ್ಯವಹಾರ ರವಿಶಂಕರ್ಗೆ ಗೊತ್ತಾಗಿದೆ. ವೈಭವ್ ಜೈನ್ ಸ್ನೇಹಿತರಾದ ಅರುಣ್, ವಿನಯ್, ಪ್ರಶಾಂತ್ ರಾಂಕಾ ಮೂಲಕ ದಂಧೆ ಮಾಡುತ್ತಿದ್ದನು. ಪ್ರತಿಷ್ಠಿತ ಹೋಟೆಲ್ಗಳಲ್ಲಿ ಪಾರ್ಟಿ ಆಯೋಜಿಸಿ ಡ್ರಗ್ಸ್ ದಂಧೆ ಮಾಡುತ್ತಿದ್ದನು ಎಂಬ ಮಾಹಿತಿ ತಿಳಿದುಬಂದಿದೆ.
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ.
Post a comment