October 2020

ನವದೆಹಲಿ,ಅ.31: ದೇಶದಲ್ಲಿ ಅತ್ಯುತ್ತಮ ಆಡಳಿತವಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೆಯ ಸ್ಥಾನದಲ್ಲಿದೆ. ಸಿಎಂ ಪಿಣರಾಯಿ ವಿಜಯನ್ ಅವರ ಕೇರಳ ಅಗ್ರಸ್ಥಾನದಲ್ಲಿದ್ದು, ಯೋಗಿ ಆದಿತ್ಯಾನಾಥ್ ಆಡಳಿತವಿರುವ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. 

ಪಬ್ಲಿಕ್ ಅಫೇರ್ಸ್ ಸೆಂಟರ್ ಎಂಬ ಸಂಸ್ಥೆ ಬಿಡುಗಡೆಗೊಳಿಸಿದ 'ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020' ಇದರಲ್ಲಿ ಕೇರಳ ದೇಶದ ಅತ್ಯುತ್ತಮ ಆಡಳಿತವಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ. ಉತ್ತರ ಪ್ರದೇಶ ಈ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ  ಮೊದಲ ಸ್ಥಾನ ಪಡೆದಿದೆ. ಸುಸ್ಥಿರ ಅಭಿವೃದ್ಧಿ ಮಾನದಂಡದ ಆಧಾರದಲ್ಲಿ ಈ ಸೂಚ್ಯಂಕದಲ್ಲಿ ರಾಂಕಿಂಗ್  ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾಗಿರುವ ಇಸ್ರೋದ ಮಾಜಿ ಮುಖ್ಯಸ್ಥ ಕೆ ಕಸ್ತೂರಿರಂಗನ್ ಹೇಳಿದ್ದಾರೆ.


ಪಬ್ಲಿಕ್ ಅಫೇರ್ಸ್ ಸೆಂಟರ್ ಸಂಸ್ಥೆ ಈ ಪಟ್ಟಿ ಸಿದ್ಧ ಪಡಿಸಿದ್ದು, ಎರಡು ಕೋಟಿಗಿಂತ ಅಧಿಕ ಜನಸಂಖ್ಯೆಯಿರುವ 18 ರಾಜ್ಯಗಳ ಪೈಕಿ ಕೇರಳ (1.388 ಅಂಕ), ತಮಿಳುನಾಡು (0.912 ಅಂಕ), ಆಂಧ್ರ ಪ್ರದೇಶ (0.531 ಅಂಕ) ಹಾಗೂ ಕರ್ನಾಟಕ (0.468 ಅಂಕ) ಮೊದಲ ನಾಲ್ಕು ಸ್ಥಾನಗಳನ್ನು ಪಡೆದಿವೆ. ಆದರೆ ಉತ್ತರ  ಪ್ರದೇಶ ( -1.461), ಒಡಿಶಾ (-1.201) ಹಾಗೂ ಬಿಹಾರ (-1.158) ರಾಜ್ಯಗಳು ನಕಾರಾತ್ಮಕ ಅಂಕಗಳೊಂದಿಗೆ ಕೊನೆಯ ಸ್ಥಾನ ಪಡೆದಿವೆ. 

ಇನ್ನು ಎರಡು ಕೋಟಿಗೂ ಕಡಿಮೆ ಜನಸಂಖ್ಯೆಯ ರಾಜ್ಯಗಳ ಪೈಕಿ ಗೋವಾ (1.745) ಪ್ರಥಮ ಸ್ಥಾನ ಪಡೆದರೆ ಮೇಘಾಲಯ (0.797) ಹಾಗೂ ಹಿಮಾಚಲ ಪ್ರದೇಶ (0.725) ನಂತರದ ಸ್ಥಾನಗಳನ್ನು ಪಡೆದಿವೆ. ಮಣಿಪುರ (-0.363), ದೆಹಲಿ (-0.289) ಹಾಗೂ ಉತ್ತರಾಖಂಡ (-0.277) ಕೊನೆಯ ಸ್ಥಾನಗಳನ್ನು ಗಳಿಸಿದ  ಸಣ್ಣ ರಾಜ್ಯಗಳಾಗಿವೆ.

ಉತ್ತಮ ಆಡಳಿತ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಚಂಡೀಘಡ (1.05) ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಪುದುಚೇರಿ (0.52), ಲಕ್ಷದ್ವೀಪ (0.003), ದಾದರ್ ಮತ್ತು ನಗರ ಹವೇಲಿ (-0.69), ಜಮ್ಮು ಮತ್ತು ಕಾಶ್ಮೀರ ತಲಾ (-0.50) ಅಂಡಮಾನ್ ಮತ್ತು ನಿಕೋಬಾರ್ (-0.30) ಇವೆ.

 https://www.timesofkarkala.in/2020/10/blog-post_8.htmlಉಡುಪಿ,ಅ.31: ಕಾಪು ಪೊಲೀಸ್ ಠಾಣಾ  ಹೆಡ್ ಕಾನ್ಸ್ಟೇಬಲ್  ಸುಧಾಕರ ಭಂಡಾರಿ ಇವರು ಕೊರೊನ ಕಾರಣಕ್ಕಾಗಿ ಉಡುಪಿಯ ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿದ್ದರು. 

ಅದೇ ವೇಳೆ ಸಾಸ್ತಾನದ ಎಡಬೆಟ್ಟು ಚೆಮ್ಪಿಯ ಗೋಪಾಲ ಆಚಾರ್ಯ ಕುಟುಂಬದ ಸದಸ್ಯರು ಅದೇ ಆಸ್ಪತ್ರೆಯಲ್ಲಿ ದಾಖಲಾಗಿ ಕುಟುಂಬದ ಎಲ್ಲ ಸದಸ್ಯರು ಗುಣಮುಖರಾಗುವ ವೇಳೆ ಗೋಪಾಲ ಆಚಾರ್ಯರ ತಾಯಿಯಾದ ಜಾನಕಿ ಆಚಾರ್ಯ (87) ಇನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುವಂತೆ ವೈದ್ಯರು ಹೇಳಿದಾಗ ಕಂಗಾಲಾದ ಗೋಪಾಲ್ ಆಚಾರ್ಯರಿಗೆ, ಮೂರು ದಿನಗಳ ಕಾಲ ತಾಯಿಯನ್ನು ತಾನು ನೋಡಿಕೊಳ್ಳುವುದಾಗಿ ಹೆಡ್ ಕಾನ್ಸ್ಟೇಬಲ್ ಸುಧಾಕರ ಭಂಡಾರಿ ಧೈರ್ಯ ಹೇಳಿದರು. ಮೂರು ದಿನಗಳ ಕಾಲ ಅವರೊಂದಿಗಿದ್ದು, ನಂತರ ಡಿಸ್ಚಾರ್ಜ್ ಮಾಡಿಸಿದರು. ಅವರನ್ನು ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹೊರಗೆ ಕರೆತಂದು ಮನೆಯವರಿಗೆ ಒಪ್ಪಿಸಿದರು. 

ಕಷ್ಟಕಾಲದಲ್ಲಿ ನೇರವಾದ ಹೆಡ್ ಕಾನ್ಸ್ಟೇಬಲ್ ಸುಧಾಕರ್  ಅವರನ್ನು ವೃದ್ದೆ ಜಾನಕಿಯವರು ನೆನಪಿನಲ್ಲಿಟ್ಟುಕೊಂಡು, 30/10/2020ರಂದು ನಡೆದಿದ್ದ ತಮ್ಮ ಮೊಮ್ಮಗ ನಿತೀಶ್ ಆಚಾರ್ಯರ ಮದುವೆಗೆ ಆಹ್ವಾನಿಸಿ,  ಸನ್ಮಾನಿಸಿ, ನೀನು ಕೂಡ ನನ್ನ ಮಗನೆ ಎಂದು ಹರಸಿದ್ದಾರೆ. 

 https://www.timesofkarkala.in/2020/10/blog-post_8.html

ಕಾರ್ಕಳ,ಅ.31: ಕಾರ್ಕಳ ಪುಲ್ಕೇರಿ ಬೈಪಾಸ್-ಸಾಣೂರು ನಡುವೆ  ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ರೀತಿಯಲ್ಲಿ ಗಾಯಗೊಂಡು ಆಸ್ಪತ್ರೆ ಗೆ‌‌ ದಾಖಲಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಯುವಕ ಕಾರ್ಕಳದಿಂದ ಸಾಣೂರಿಗೆ  ಕಟ್ ಇಡ್ಲಿ ಸಿದ್ದ ಪಡಿಸಿ ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ.


ಅಪಘಾತದ ತೀವ್ರತೆಗೆ ದ್ವಿಚಕ್ರ ಮೋಟಾರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಹಾನಿಯಾಗಿದೆ. 

ಕಾರ್ಕಳ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ  ಆಗಮಿಸಿದ್ದಾರೆ.


 https://www.timesofkarkala.in/2020/10/blog-post_8.html

 ಕಾರ್ಕಳ ಬ್ಲಾಕ್ ಕಾಂಗ್ರೆಸ್:ಇಂದಿರಾಗಾಂಧಿ ಪುಣ್ಯತಿಥಿ ಆಚರಣೆ ಹಾಗು ಸರ್ದಾರ್ ವಲ್ಲಭಭಾಯ್ ಪಟೇಲ್ ಜನುಮ ದಿನಾಚರಣೆ  ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಮಾತನಾಡಿ,"ಇಂದಿರಾಗಾಂಧಿ ದೇಶಕ್ಕೆ ಕೊಟ್ಟ ಕೊಡುಗೆ ಹಾಗು ತುರ್ತುಪರಿಸ್ಥಿತಿ ಆ ಸಂದರ್ಭದಲ್ಲಿ ಯಾಕೆ  ಹೇರಲಾಯಿತು ಮತ್ತು ತುರ್ತುಪರಿಸ್ಥಿತಯಿಂದ ಬಡಜನತೆಗೆ ಹಾಗು ದೇಶಕ್ಕೇನು ಲಾಭವಾಯಿತು ಎಂಬುದನ್ನು ವಿವರಿಸಿ ಹಾಗೆಯೇ ಸಂಘಪರಿವಾರ ಆಗಲೂ ಈಗಲೂ ಇಂದಿರಾಗಾಂಧಿಯವರ  ಬಗ್ಗೆ ಹೇಗೆ ಅಪಪ್ರಚಾರ ಮಾಡುವ ಮೂಲಕ ತುರ್ತುಪರಿಸ್ಥಿತಿಯ ಕಪ್ಪುಚುಕ್ಕೆಯನ್ನಿಟ್ಟಿದ್ದಾರೆ. ಆ ಕಪ್ಪುಚುಕ್ಕೆಯನ್ನಳಿಸುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದಾಗಬೇಕೆಂದು ಹೇಳಿದರು. ದೇಶೀಯ ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶದ ಆಡಳಿತದೊಳಗಡೆ ಸೇರಿಸಿದ ವಲ್ಲಭ ಬಾಯ್ ಪಟೇಲರ ನಿರ್ಭಿಡೆಯ ನಿರ್ಧಾರ ಅವರನ್ನು ಒಬ್ಬ ಉಕ್ಕಿನ ಮನುಷ್ಯನನ್ನಾಗಿಸಿತ್ತು ಎಂದರು.
ವಕ್ತಾರ ಬಿಪಿನ ಚಂದ್ರಪಾಲ್ ನಕ್ರೆ,  ಪ್ರಧಾನ ಕಾರ್ಯದರ್ಶಿ ಜೋಜ್೯ ಕ್ಯಾಸ್ತಲೀನೋ, ಸುಷ್ಮಾ ಹಾಗೂ ಇತರ ಗಣ್ಯರು ಸಂದರ್ಭೋಚಿತವಾಗಿ ಮಾತಾಡಿದರು.


ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಸದಸ್ಯ ಸಿರಿಯಣ್ಣ ಶೆಟ್ಟಿ, ರಾಜ್ಯ ಯುವ  ಕಾರ್ಯದರ್ಶಿ ರವಿಶಂಕರ ಸೇರ್ವೆಗಾರ್, ಬ್ಲಾಕ್ ಉಪಾಧ್ಯಕ್ಷ ದಯಾನಂದ ಬಂಗೇರ,ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಮಹಿಳಾಧ್ಯಕ್ಷೆ ನಳಿನಿ ಆಚಾರ್ಯ, ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ, ಜಿಲ್ಲಾ ಅ ಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ  ಆರೀಫ್ ಕಲ್ಲೊಟ್ಟೆ, ಎಸ್ಸಿ ಘಟಕದ ಅಧ್ಯಕ್ಷ ಅಣ್ಣಪ್ಪ ನಕ್ರೆ, ಐಟಿ ಸೆಲ್ ಸತೀಷ್ ಕಾರ್ಕಳ, ನಗರ ಮಹಿಳಾಧ್ಯಕ್ಷೆ ಕಾಂತಿ ಶೆಟ್ಟಿ, ಪುರಸಭಾ ಸದಸ್ಯರಾದ ಶುಭದಾ ರಾವ್, ಸೋಮು, ಪ್ರತಿಮಾ, ಹರೀಷ್ ದೇವಾಡಿಗ, ಪ್ರಭಾ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಸ್ವಾಗತಿಸಿದರು. ಸುಶಾಂತ್ ಸುಧಾಕರ್ ಪ್ರಸ್ತಾವನೆ ಗೈದು ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆ ಗೈದರು.


 https://www.timesofkarkala.in/2020/10/blog-post_8.html


MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget