ಕಾರ್ಕಳ,ಅ,8: ಆರೋಗ್ಯಕರ ಆಹಾರ, ಪೋಷಣೆ ಮತ್ತು ಆರೋಗ್ಯಕರ ಜೀವನಶೈಲಿಗಳ ಕುರಿತ ಸೆಮಿನಾರ್ ಅಕ್ಟೋಬರ್ 11 ರ ಭಾನುವಾರ ಬೆಳಿಗ್ಗೆ 10.30 ಕ್ಕೆ ಕಾರ್ಕಳದ ಕಟೀಲು ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆಯಲಿದೆ.
ಜನರು ಹೇಗೆ ಆರೋಗ್ಯಕರವಾಗಿ ಬದುಕಬಹುದು ಮತ್ತು ಉತ್ತಮ ಆಯ್ಕೆಗಳನ್ನು ಮಾಡಬಹುದು ಎಂಬ ವಿಷಯದ ಮೇಲೆ ಸೆಮಿನಾರ್ ನಲ್ಲಿ ಉಪನ್ಯಾಸ ನೀಡಲಾಗುತ್ತದೆ. ತಜ್ಞರ ಸಹಾಯ ಪಡೆಯಲು ಮತ್ತು ಉತ್ತಮ ಜೀವನಶೈಲಿಯತ್ತ ಮೊದಲ ಹೆಜ್ಜೆ ಇಡಲು ಪ್ರೇರೇಪಿಸುವಂತಹ ಉಪಯುಕ್ತ ಸಲಹೆಗಳನ್ನು ಪಡೆಯಲು ಜನರಿಗೆ ಸೆಮಿನಾರ್ ಅದ್ಭುತ ಅವಕಾಶವನ್ನು ನೀಡುತ್ತದೆ ಮತ್ತು ಯಾವುದೇ ಅನಾರೋಗ್ಯದಿಂದ ಚೇತರಿಸಿಕೊಳ್ಳುವುದು ಮತ್ತು ಔಷಧ ಮುಕ್ತ ಜೀವನವನ್ನು ನಡೆಸುವುದು ಹೇಗೆ ಎನ್ನುವುದನ್ನು ಹೇಳಿಕೊಡಲಾಗುತ್ತದೆ.
ನೈಟ್ಹುಡ್ ಪ್ರಶಸ್ತಿ ವಿಜೇತ ಸರ್ ಡಾ. ಎಸ್.ಎಚ್. ಕುಲಕರ್ಣಿ ಅವರು ಸೆಮಿನಾರ್ ನ ಮುಖ್ಯ ಭಾಷಣಕಾರರಾಗಿದ್ದಾರೆ. ಸೆಮಿನಾರ್ ಅನ್ನು ಇಎಮ್ ಡಬ್ಲ್ಯೂ ಐ ಮಾರ್ಕೆಟಿಂಗ್ ಪ್ರಸ್ತುತ ಪಡಿಸಲಿದೆ.ಎಲ್ಲರಿಗೂ ಉಚಿತ ಪ್ರವೇಶಾವಕಾಶವಿದೆ.
Post a comment