ಲಕ್ಷಾಂತರ ಜನರು ಕಲೆಯನ್ನು ನಂಬಿ ಬದುಕುವವಿರಿದ್ದಾರೆ ನಮ್ಮ ರಾಜ್ಯದಲ್ಲಿ.. ಕೆಲವರು ಕಲೆಯನ್ನು ಪ್ರವೃತ್ತಿಯಾಗಿ, ವೃತ್ತಿಗೆ ಇನ್ಯಾವುದೋ ಕಸುಬನ್ನು ನಂಬಿ ಬದುಕುವವರಿದ್ದಾರೆ, ಆದರೆ 75% ಕಲಾವಿದರು ಕೇವಲ ಕಲಾ ಜೀವನವನ್ನೇ ನಂಬಿದ್ದಾರೆ,ಅದಕ್ಕೂ ಕಾರಣವಿದೆ, ಒಬ್ಬ ನಾಟಕ ಕಲಾವಿದನ ಬದುಕನ್ನೇ ತೆಗೆದುಕೊಳ್ಳೊಣ. ಸೆಪ್ಟೆಂಬರ್ ನಿಂದ ಸುರುವಾದ ನಾಟಕಗಳು ಮೇ ತಿಂಗಳ ತನಕ ಇರುತ್ತವೆ, ವಾರದಲ್ಲಿ ಕನಿಷ್ಟ 3/4 ನಾಟಕಗಳು ಅದು ರಾತ್ರಿ,ಕೆಲವು ಸಂಘ ಸಂಸ್ಥೆಗಳು ರಾತ್ರಿ 8ಘಂಟೆಗೆ ನಾಟಕ ಸುರು ಎಂದು ಹೇಳಿ ವೇದಿಕೆ ಕಲಾವಿದರಿಗೆ ಬಿಟ್ಟು ಕೊಡುವುದೆ ರಾತ್ರಿ 11ಘಂಟೆಗೆ ..ಆ ಕಲಾವಿದ ನಾಟಕ ಮುಗಿಸಿ ಮನೆ ತಲುಪುವಾಗ ಕೋಳಿ ಕೂಗುತ್ತಿರುತ್ತದೆ. ಇಂತಹ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಕಲಾವಿದ ಕೇವಲ ಕಲೆಯನ್ನೇ ನಂಬೋ ಪರಿಸ್ಥಿತಿ ಒದಗಿ ಬರುತ್ತದೆ, ಆದರೆ ಈ ಕರೊನಾ ಎಂಬ ಮಹಾಮಾರಿಯಿಂದಾಗಿ ಎಲ್ಲರ ಬದುಕು ಅಸ್ಥಿರವಾಯಿತು,ಕಳೆದ ಮಾರ್ಚ್ ತಿಂಗಳಿಂದೀಚೆ ಯಾವುದೇ ಕಾರ್ಯಕ್ರಮವಿಲ್ಲದೆ ಯಾಕಾದರೂ ಕಲಾಬದುಕಿಗೆ ಬಂದಿದ್ದೇವೆ ಎನ್ನುವಂತಾಗಿದೆ ಕಲಾವಿದನ ಜೀವನ.
ಸರಕಾರವು ಅಷ್ಟೇ ಯಕ್ಷಗಾನ ಮೇಳಗಳಿಗೆ ಒಪ್ಪಿಗೆ ನೀಡಿ ಮಾರ್ಗಸೂಚಿ ನೀಡಿದೆ.. ಉಳಿದ ಕಲಾವಿದರಿಗೆ ಯಾವುದೇ ಒಪ್ಪಿಗೆಯು ಇಲ್ಲ., ಮಾರ್ಗಸೂಚಿಯು ಇಲ್ಲ,ಯಾಕೀ ತಾರತಮ್ಯ ಗೊತ್ತಿಲ್ಲ. ಇನ್ನಾದರೂ ಸರಕಾರ ಎಲ್ಲಾ ಕಲಾವಿದರಿಗೆ ಕಲಾ ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಲಿ, ಆ ಮುಖೇನ ಸಾಂಸ್ಕೃತಿಕಲೋಕ ಮತ್ತೆ ತಮ್ಮ ಚಟುವಟಿಕೆಗಳಲ್ಲಿ ತೊಡಗುವಂತಾಗಲಿ ....ಇದೆಲ್ಲವೂ ಆಗಬೇಕಾದರೆ ಸಂಘ ಸಂಸ್ಥೆಗಳು ಮುಂದೆ ಬಂದು ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು... ಆ ಮುಖೇನ ಮತ್ತೊಮ್ಮೆ ಸಾಂಸ್ಕೃತಿಕ ಲೋಕ ಪ್ರಜ್ವಲಿಸಬೇಕೆಂಬುದೇ ನಮ್ಮ ಆಶಯ... ನಮಸ್ಕಾರ
ಇತೀ
ಮಣಿ ಕೋಟೆಬಾಗಿಲು
ನಾಟಕ ರಚನೆಗಾರ/ರಂಗನಟ
ಲಕುಮಿ ತಂಡದ ಕಲಾವಿದ
Post a comment