ಕಾರ್ಕಳ:ನೆಲ್ಲಿಕಾರು ನಿವಾಸಿ ರತ್ನವರ್ಮ ಜೈನ್ ಎಂಬುವವರು ಹೊಸ್ಮಾರು ಪ್ರಾಥಮಿಕ ಶಾಲೆಯ ಎದುರು ಬೈಕ್ ನಲ್ಲಿ ಹೋಗುತ್ತಿದ್ದಾಗ ಮೂರು ಜನರು ನಡೆಸಿದ ಘಟನೆ ನಡೆದಿದೆ.
ಹರೀಶ್,ಪ್ರಕಾಶ್,ಪ್ರಶಾಂತ್ ಹಲ್ಲೆ ನಡೆಸಿದ ಆರೋಪಿಗಳು.
ಸರಕಾರಿ ಅಕ್ರಮ ಸಕ್ರಮ ಜಾಗದ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರದಲ್ಲಿ ಆರೋಪಿತರು ದಿನಾಂಕ 27ರಂದು ಹೊಸ್ಮಾರು ಪ್ರಾಥಮಿಕ ಶಾಲೆಯ ಎದುರು ರತ್ನವರ್ಮ ಜೈನ್ ರವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಬೈಕ್ ತಡೆದು ನಿಲ್ಲಿಸಿ ಆರೋಪಿ ಹರೀಶ್ ತನ್ನ ಕೈಯಲ್ಲಿ ಇದ್ದ ಮರದ ಸೊಂಟೆಯಿಂದ ಎಡ ಕೈ ಮೊಣಗಂಟಿನ ಮೇಲೆ ಹೊಡೆದಿದ್ದು, ಅಲ್ಲದೇ ಪ್ರಕಾಶ್ ಮತ್ತು ಪ್ರಶಾಂತ್ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾರ್ಕಳ: ಪಿರ್ಯಾದಿದಾರರಾದ ರತ್ನವರ್ಮ ಜೈನ್ (59), ತಂದೆ: ದಿ. ಜಿನರಾಜ ಶೆಟ್ಟಿ, ವಾಸ: ಪಿ ವಿ ನಿಲಯ ನೆಲ್ಲಿಕಾರು,ಅಂಚೆ ಮತ್ತುಗ್ರಾಮ ಮೂಡಬಿದ್ರೆ ತಾಲೂಕು ದ.ಕ ಜಿಲ್ಲೆ ಹಾಗೂ ಆರೋಪಿತರಾದ 1)ಹರೀಶ್, 2)ಪ್ರಕಾಶ್, 3) ಪ್ರಶಾಂತ್ ಇವರಿಗೂ ಸರಕಾರಿ ಅಕ್ರಮ ಸಕ್ರಮ ಜಾಗದ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರದಲ್ಲಿ ಆರೋಪಿತರು ದಿನಾಂಕ 27/10/2020 ರಂದು 19:15 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮಾರು ಪ್ರಾಥಮಿಕ ಶಾಲೆಯ ಎದುರು ಬೈಕ್ ನಲ್ಲಿ ಹೋಗುತ್ತಿದ್ದಾಗ ಆರೋಪಿಗಳಾದ ಹರೀಶ್, ಪ್ರಕಾಶ್,ಪ್ರಶಾಂತ್ ರವರು ಪಿರ್ಯಾದಿದಾರರ ಬೈಕ್ ತಡೆದು ನಿಲ್ಲಿಸಿ ಹರೀಶ್ ತನ್ನ ಕೈಯಲ್ಲಿ ಇದ್ದ ಮರದ ಸೊಂಟೆಯಿಂದ ಪಿರ್ಯಾದುದಾರರ ಎಡ ಕೈ ಮೊಣಗಂಟಿನ ಮೇಲೆ ಹೊಡೆದಿದ್ದು, ಅಲ್ಲದೇ ಪ್ರಕಾಶ್ ಮತ್ತು ಪ್ರಶಾಂತ್ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 81/2020 ಕಲಂ:, 341, 324, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
Post a comment