ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್-Times Of Karkala

 ಬೆಂಗಳೂರು,ಅ.22: ಚಿರಂಜೀವಿ ಸರ್ಜಾ ಪತಿ ಹಾಗೂ ನಟಿ ಮೇಘನಾ ರಾಜ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ನಿಶ್ಚಿತಾರ್ಥದ ದಿನವೇ ಮಗುವಿಗೆ ಜನ್ಮ ನೀಡಿದ್ದು, ಸಂಭ್ರಮವನ್ನು ದುಪ್ಪಟ್ಟುಗೊಳಿಸಿದೆ. ಈ ಕುರಿತು ಸ್ಯಾಂಡಲ್ ವುಡ್ ನಲ್ಲೂ ಸಂಭ್ರಮ ಮನೆ ಮಾಡಿದೆ. 


ನೋವನ್ನು ದೂರ ಮಾಡಲು ಚಿರು ಮಗು ರೂಪದಲ್ಲಿ ಜನಿಸಿದ್ದಾನೆ 

ತಮ್ಮ ನೋವನ್ನು ದೂರ ಮಾಡಲು ಚಿರು ಮಗು ರೂಪದಲ್ಲಿ ಹುಟ್ಟಿದ್ದಾನೆ ಎಂದು ಅರ್ಜುನ್ ಸರ್ಜಾ ಸಂತೋಷವನ್ನು  ಹಂಚಿಕೊಂಡಿದ್ದಾರೆ.  36 ವರ್ಷಗಳ ಹಿಂದೆ ಚಿರು ಹುಟ್ಟಿದಾಗ ಚೆನ್ನೈನಿಂದ ನೋಡಲು ಬಂದಿದ್ದೆ. ಈಗ ಮಗುವನ್ನು ನೋಡಲು ಬರುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ಹೇಳಿಕೊಳ್ಳಲಾಗದಷ್ಟು ಸಂತೋಷವಾಗುತ್ತಿದೆ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ. 

ನಮ್ಮಣ್ಣನ ಜತೆ ಇದ್ದ ಫೀಲ್ ಆಯಿತು

ಅತ್ತಿಗೆಗೆ ಗಂಡು ಮಗು ಆಗಿದ್ದು ತುಂಬಿ ಸಂತೋಷ ಕೊಟ್ಟಿದೆ. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜತೆ ಇದ್ದ ಫೀಲ್ ಆಯಿತು ಎಂದು ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ. ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿಯುತ್ತಿದ್ದಂತೆ ಧ್ರುವ ಸರ್ಜಾ ಪತ್ನಿ ಪ್ರೇರಣಾ ಸಮೇತ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದರು.  





ಜಾಹೀರಾತು




https://www.timesofkarkala.in/2020/10/blog-post_8.html













Labels:

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget