ಪರಂಗಿಪೇಟೆ:ಸ್ಥಳೀಯ ಬಿಜೆಪಿ ಮುಖಂಡ, ಫೋಟೋಗ್ರಾಫರ್ ಮೇಲೆ ತಲವಾರ್ ದಾಳಿ:3 ಬಂಧನ-Times Of Karkala

ಬಂಟ್ವಾಳ,ಅ: ಪರಂಗಿಪೇಟೆಯಲ್ಲಿ ಸ್ಥಳೀಯ  ಬಿಜೆಪಿ ಮುಖಂಡ, ಫೋಟೋಗ್ರಾಫರ್ ಮೇಲೆ ತಲವಾರ್ ದಾಳಿ ನಡೆಸಿದ ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. 


ಮಹಮ್ಮದ್ ಅರ್ಷದ್, ಅಬ್ದುಲ್ ರೆಹ್ಮಾನ್, ಮಹಮ್ಮದ್ ಸೈಫುದ್ದೀನ್ ಬಂಧಿತ ಆರೋಪಿಗಳು. ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿರುವ ಫರಂಗಿಪೇಟೆಯಲ್ಲಿನ ದಿನೇಶ್ ರವರ ತೃಷಾ ಫೋಟೋ ಸ್ಟುಡಿಯೋಕ್ಕೆ ನಾಲ್ಕು ಜನ ಯುವಕರು ಫೋಟೋ ತೆಗೆಸಲು ಬಂದು ಫೋಟೋಗ್ರಾಫರ್ ಮೇಲೆ ದಾಳಿ ನಡೆಸಿದ್ದಾರೆ. 

ಇತ್ತೀಚಿಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಳದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಫೋಟೋಗ್ರಾಫರ್ ಹೆಣ್ಣು ಮಗುವಿನ ಕಡೆಗೆ ಬೆಂಬಲ ನೀಡಿದ್ದರಿಂದಾಗಿ ದ್ವೇಷದಿಂದ ಈ ದಾಳಿ ನಡೆದಿದೆ ಎನ್ನಲಾಗಿದೆ. 

ದಿನೇಶ್ ಅವರನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ತಲೆಗೆ, ಬಲಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಹಲ್ಲೆ ನಡೆಸಿ ತೀವ್ರ ಗಾಯವಾಗಿದ್ದು, ಅ ವೇಳೆ ಅಲ್ಲಿದ್ದ ಶೇಖರ್ ಪೂಜಾರಿ ಹಲ್ಲೆಯಾಗುವುದನ್ನು ತಪ್ಪಿಸಲು ಅಲ್ಲೇ ಇದ್ದ ಕುರ್ಚಿಯಿಂದ ಇಬ್ಬರು ಆರೋಪಿಗಳನ್ನು ಹೊಡೆದಿದ್ದು, ಅವರಿಗೆ ಗಾಯವಾಗಿರುಇತ್ತದೆ. ನಂತರ ಗಾಯಗೊಂಡ ಫೋಟೋಗ್ರಾಫರ್ ದಿನೇಶ್ ಅವರನ್ನು ಎ ಜೆ ಆಸ್ಪತ್ರೆಗೆ ಸೇರಿಸಲಾಯಿತು.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳಾದ  ಅಮ್ಮೆಮ್ಮರು   ನಿವಾಸಿ ಮಹಮ್ಮದ್ ಅರ್ಷದ್(19), ಅಬ್ದುಲ್ ರೆಹ್ಮಾನ್(22), ಮಹಮ್ಮದ್ ಸೈಫುದ್ದೀನ್(22)ರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗದ ಮಾರ್ಗದರ್ಶನದಲ್ಲಿ ಪಿಎಸ್ ಐ ಪ್ರಸನ್ನ ಹಾಗೂ ಸಿಬ್ಬಂದಿಯವರು ಬಂಧಿಸಿದ್ದಾರೆ. 

ಜಾಹೀರಾತುhttps://www.timesofkarkala.in/2020/10/blog-post_8.htmlPost a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget