ಬೇಲಾಡಿ:ಮನವಿ ನೀಡಿ ವರುಷಗಳು ಸಂದರೂ ಕಾಮಾಗಾರಿಯನ್ನೇ ಕಾಣದ ರಸ್ತೆ-Times of karkala


ಇದು ನಾನು ಬರೆದಿರುವ 2  ವರ್ಷಗಳ ಹಿಂದಿನ ನಮ್ಮ  ನಿಟ್ಟೆ ಬೇಲಾಡಿಸಂಪರ್ಕ ರಸ್ತೆಯ ದುರವಸ್ತೆ, ಇಂದಿಗೆ ಎರಡು ವರ್ಷಗಳು ಸವೆದವು, ಆದರೆ ರಸ್ತಗೆ ಮನವಿ ಮಾಡಲು ಶಾಸಕರು ಮಂತ್ರಿಗಳ ಕಛೇರಿಗೆ ಹಳ್ಳಿಯ ಮುಗ್ದರನ್ನು ಮಂಗ ಮಾಡಿ ಅಲೆದಡಿಸುವುದು ಇಂದು ಬೆಳಿಗ್ಗೆ ತನಕವೂ ನಿಂತಿಲ್ಲ.


ಈ ಚಿತ್ರದಲ್ಲಿ ಕಾಣಿಸುತ್ತಿರುವುದು ರಸ್ತೆ..!! 

ಇದು ಕಾಂತಾವರ ಗ್ರಾಮದ ಬೇಲಾಡಿಯಿಂದ ಲೆಕ್ಕೆಸಿರಿ ಪಲ್ಕೆ ಮೂಲಕ ಹಾದು ಹೋಗಿ ನಿಟ್ಟೆ ಗ್ರಾಮದ ಪರಪ್ಪಾಡಿಯನ್ನು ಸಂಪರ್ಕಿಸುವ ರಸ್ತೆಯಿದು. ಕೇವಲ  3.5 ಅಥವಾ 4 KM,ನಷ್ಟು  ಮಾತ್ರಾ ಇರುವ ಅತೀ ಕಡಿಮೆ ದೂರದ ರಸ್ತೆಯಾಗಿದೆ.  ಬೇಲಾಡಿಯಿಂದ ನಿಟ್ಟೆ ಗ್ರಾಮದ ಪರಪ್ಪಾಡಿಗೆ ಸಂಪರ್ಕ ಕೊಡಲು ಅತ್ಯಂತ ಹತ್ತಿರದ ರಸ್ತೆಯಿದು. ಇದನ್ನು ಹೊರತು ಪಡಿಸಿದರೆ ಬೇಲಾಡಿಯಿಂದ ಪರಪ್ಪಾಡಿಗೆ ಹೋಗಲು ಬೋಳ ಕೆಮ್ಮಣ್ಣು ನಿಟ್ಟೆಯಾಗಿ ಸುಮಾರು 15 KM ದೂರಕ್ಕೆ ಒಂದು ಪ್ರದಕ್ಷಿಣೆ ಬಂದು ಪರಪ್ಪಾಡಿಯನ್ನು ತಲುಪಬೆಕಾಗುತ್ತದೆ. ಸುಮಾರು 11KM ,ನಷ್ಟು ಹತ್ತಿರವಾಗಿಸುವ ಬೇಲಾಡಿ ಪರಪ್ಪಾಡಿ ರಸ್ತೆಯು  ಸಂಚಾರ ಯೋಗ್ಯವಾಗಿಲ್ಲ, ಕಾರಣ ಈ ರಸ್ತೆಯು ನಿರ್ಮಾಣವಾದಂದಿನಿಂದ ಇಲ್ಲಿಯ ತನಕವೂ ಡಾಮರೀಕರಣವನ್ನೇ ಕಂಡಿಲ್ಲ.


ಈ ರಸ್ತೆಗೆ ಡಾಮರೀಕರಣವಾದರೆ ಅದರಿಂದಾಗುವ ಉಪಯೋಗಗಳು: 

ಬೇಲಾಡಿಯಿಂದ ತಾಲೂಕು ಕೇಂದ್ರ ಕಾರ್ಕಳಕ್ಕೆ ತೆರಳಲು ತುಂಬಾ ಸಮೀಪದ ಮಾರ್ಗವಾಗಲಿದೆ. ನಿಟ್ಟೆ ಕಾಲೇಜಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೂ  ಕಾಲೇಜಿಗೆ ಹೋಗಲು ಇದು ಅತ್ಯಂತ ಸನಿಹದ ಹಾದಿಯಾಗಲಿದೆ.‌ ಅಷ್ಟೇ ಅಲ್ಲದೇ  ದಿನ ನಿತ್ಯ ಅನೇಕ ಜನರು ಇದೇ ರಸ್ತೆ ಮಾರ್ಗವಾಗಿ ಪರಪ್ಪಾಡಿಗೆ, ಪರಪ್ಪಾಡಿಯಿಂದ ಬೇಲಾಡಿಗೆ ಸಂಚರಿಸುತ್ತಾರೆ. ಡಾಮರೀಕರಣವಾದರೆ ಎರಡೂ ಗ್ರಾಮವನ್ನು ಬೆಸೆಯುವ ಪ್ರಮುಖ ರಸ್ತೆಯಾಗಿ ರೂಢಿಯಾಗಲಿದೆ.  
ಇನ್ನೂ ಅತೀ ಅಗತ್ಯ ಏನೆಂದರೆ ಬೌಗೋಳಿಕವಾಗಿ ನಿಟ್ಟೆ ಗ್ರಾಮದ ಪರಪ್ಪಾಡಿಯ ಜೊತೆಗಿರುವ ಮೊರಂಪುಗುಡ್ಡೆ, ಪರಪ್ಪಾಡಿಯ ಆಸುಪಾಸಿನ 50ಕ್ಕೂ ಅಧಿಕ ಮನೆಗಳು ಕಾಂತಾವರ ಗ್ರಾಮಕ್ಕೊಳಪಟ್ಟಿವೆ. ಕಾಂತಾವರದ ಬೇಲಾಡಿ ವಾರ್ಡಿಗೆ ಸೇರಿರುವ ಈ ಪ್ರದೇಶದ ಜನರು ಗ್ರಾಮ ಪಂಚಾಯತಿನ ಕೆಲಸ ಕಾರ್ಯಗಳಿಗೆ ಬರಬೇಕಾದರೆ ದೂರದ ಬಾರಾಡಿ ಚಿಲಿಂಬಿ ಬೆಳುವಾಯಿಯಾಗಿ ಕಾಂತಾವರ ಪಂಚಾಯತ್ ಕಾರ್ಯಾಲಯಕ್ಕೆ ಬರಬೇಕು. ಅದು ಸಾಕಷ್ಟು ದೂರದ ರಸ್ತೆ ಮಾರ್ಗವೂ ಹೌದು.  ಇಲ್ಲಿನ ಜನರ ಅತೀ ಮುಖ್ಯ ಸಮಸ್ಯೆ ಏನೆಂದರೆ ಪಡಿತರ (ರೇಷನ್) ಖರೀದಿಸಲು ಕಾಂತಾವರಕ್ಕೆ ಬರಬೇಕೆಂದರೆ ಅಟೋ ರಿಕ್ಷಾ ಮೂಲಕ ಅದೇ ಚಿಲಿಂಬಿಯಾಗಿ ಹತ್ತು ಹನ್ನೆರಡು ಕಿಲೋಮೀಟರ್ ದೂರ ಕ್ರಮಿಸಿ ಬಂದು ಪಡಿತರ (ರೇಷನ್) ಪಡೆದು ವಾಪಾಸು ಹೋಗಬೇಕು. ಈ ಸಮಸ್ಯೆಗಳನ್ನು ಇಷ್ಟು ವರ್ಷವಾದರೂ ಯಾವ ಜನಪ್ರತಿನಿದಿಯಾಗಲಿ, ಗ್ರಾಮ ಪಂಚಾಯತಿ ಆಡಳಿತವಾಗಲಿ ಕೇಳುವ ಗೋಜಿಗೆ ಹೋಗಿಲ್ಲ. ಪಡಿತರ ಖರೀದಿಗೆ ಬರುವ ಮಹಿಳೆಯರ ಗೋಳು ಕಂಡು ಅಯ್ಯೋ ಪಾಪ ಅನಿಸುವುದು ಸಹಜ. ಅದೇ ಬೇಲಾಡಿ ಪರಪ್ಪಾಡಿ ರಸ್ತೆ ಡಾಮರಿಕರಣವಾಗಿ ಅಭಿವೃದ್ಧಿ ಕಂಡರೆ ಈ ಎಲ್ಲಾ ಸಮಸ್ಯೆಗಳಿಗೂ ತೆರೆ ಬೀಳಲಿದೆ. ಇವಿಷ್ಟೇ ಅಲ್ಲದೇ ಪರಪ್ಪಾಡಿಯಲ್ಲಿ ನಿರ್ಮಲ ಪದವು ಚರ್ಚ್ ಇದ್ದು ಇದರ ವ್ಯಾಪ್ತಿಗೆ ಒಳಪಡುವ ಕ್ರೈಸ್ತ ಭಾಂದವರ ಮನೆಗಳು   ಬೇಲಾಡಿ ಹಾಗೂ ವಂಜಾರಕಟ್ಟೆ ಭಾಗದಲ್ಲಿಯೂ ಇದೆ. ಈ ಎಲ್ಲಾ ಕ್ರೈಸ್ತ ಭಾಂದವರು ಭಾನುವಾರದಂದು ಪ್ರಾರ್ಥನೆ ಸಲ್ಲಿಸಲು ಇದೇ ಬೇಲಾಡಿ ಲೆಕ್ಕೆಸಿರಿ ಪಲ್ಕೆ ಮಾರ್ಗವಾಗಿ ಪರಪ್ಪಾಡಿ ಚರ್ಚಿಗೆ ತೆರಳುತ್ತಾರೆ.   ಮಳೆಗಾಲ ಬಂದಾಕ್ಷಣ ಇಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳು ಸಂಚರಿಸುವುದು ದುಸ್ತರವಾಗುದರಿಂದ ಅವರೂ 15 KM ದೂರ ಸಂಚರಿಸುವುದು ಅನಿವಾರ್ಯ. ಈ ಎಲ್ಲಾ ಕಾರಣಗಳಿಂದ ಬಹುಪಯೋಗಿಯಾಗಿರುವ ಈ ರಸ್ತೆಯನ್ನು ಆದಷ್ಟು ಬೇಗ ಡಾಮರೀಕರಣಗೊಳಿಸುವುದು ಅತ್ಯಂತ ಅವಶ್ಯಕ. (ಅರಣ್ಯ ಇಲಾಖೆಯ ಸಮಸ್ಯೆಯಿದೆ ಎನ್ನುವ ಮಾತೂ ಕೇಳಿ ಬರುತಿದ್ದರೂ ಇದು ಅತ್ಯಂತ ಹಳೆಯ ರಸ್ತೆಯಾಗಿರುವುದರಿಂದ ಸಮಸ್ಯೆಯಾಗದು ಎನ್ನುವ ಭರವಸೆಯೂ ಇದೆ) 

ಚುನಾವಣೆಗಳು ಸಮೀಪ ಬಂದಾಗ ಜನಪ್ರತಿನಿಧಿಗಳಿಂದ ಒಂದಷ್ಟು ಭರವಸೆಗಳು, ಆಶ್ವಾಸನೆಗಳನ್ನು ಬಿಟ್ಟರೆ ಡಾಮರೀಕರಣದ ಕನಸು ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ. ಡಾಮರೀಕರಣಕ್ಕಾಗಿ ಬೇಲಾಡಿಯ ಅನೇಕ ಹಿರಿಯರು, ಸಾಮಾಜಿಕ ಮುಂದಾಳುಗಳು ಹಲವಾರು ವರ್ಷಗಳದ ಸಂಭಂದ ಪಟ್ಟವರಿಗೆ ಮನವಿ ಮಾಡಿಕೊಳ್ಳುತ್ತನೇ ಬಂದಿದ್ದರೂ ಪಲಿತಾಂಶ ಮಾತ್ರ ಶೂನ್ಯ.  ಹಾಗಾಗಿ ಆದಷ್ಟು ಬೇಗ ಕಾಂತಾವರ ಗ್ರಾಮ ಪಂಚಾಯತಿ ಆಡಳಿತ ಮತ್ತು ಚುನಾಯಿತ ಜನಪ್ರತಿನಿಧಿಗಳು  ಈ ರಸ್ತೆಗೊಂದು ಡಾಮರೀಕರಣ ಭಾಗ್ಯವನ್ನು ಕರುಣಿಸುವಂತಾಗಲಿ ಎನ್ನುವುದೇ ಬೇಲಾಡಿ ಹಾಗೂ ಪರಪ್ಪಾಡಿ ಭಾಗದ ಜನರ ಆಶಯ.

PraDeep Belady


ಜಾಹೀರಾತು
https://www.timesofkarkala.in/2020/10/blog-post_8.html
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget