ಮುನಿಯಾಲು:ಬೈಕ್ ಅಪಘಾತ,ತಾಯಿ ಹಾಗೂ ಮಗುವಿನ ಮೂಳೆ ಮುರಿತ-Times of karkala

ಹೆಬ್ರಿ:ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಸಹಸವಾರರು  ಗಾಯಗೊಂಡ ಘಟನೆ ವರಂಗ ಗ್ರಾಮದ ಮುನಿಯಾಲು ಹೈಸ್ಕೂಲ್  ಬಳಿ ನಡೆದಿದೆ.ಅಪಘಾತದ ತೀವ್ರತೆಗೆ  ಶ್ವೇತಾ(25) ರವರಿಗೆ  ಬಲಮೊಣಕಾಲಿನ ಬಳಿ ಮೂಳೆ ಮುರಿತವಾಗಿದ್ದು ಬಲಕಾಲಿನ ಪಾದದ ಬಳಿ ತರಚಿದ ಗಾಯವಾಗಿರುತ್ತದೆ.ಮಗು ಸ್ಮಯನ್ (2) ರವರಿಗೆ ಬಲಮೊಣಕಾಲಿನ ಕೆಳಗೆ ಮೂಳೆ ಮುರಿತವಾಗಿದ್ದು ಎಡಬದಿಯ ಹಣೆಯಲ್ಲಿ ತರಚಿದ ಗಾಯವಾಗಿರುತ್ತದೆ. ಪೊಲೀಸ್ ವರದಿ 

ಹೆಬ್ರಿ: ಪಿರ್ಯಾದಿದಾರರಾದ ಯೋಗೀಶ (34), ತಂದೆ: ಚಂದು ಮೂಲ್ಯ, ವಾಸ:  ಕುಡಂದೂರು ಬೆಟ್ಟು ಹೌಸ್ ಕೆದಿಂಜೆ ಅಂಚೆ ಕಾರ್ಕಳ ತಾಲೂಕು ಇವರು ದಿನಾಂಕ 07/10/2020 ರಂದು ಹೆಂಡತಿ ಶ್ವೇತಾ (25) , ಮಗ ಸ್ಮಯನ್ (2) ರವರನ್ನು KA-20-ES-0368 ನೇ ಮೋಟಾರ್ ಸೈಕಲ್ ನಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ವರಂಗ ಗ್ರಾಮದ ತಲೆಮನೆಗೆ ಹೋಗುತ್ತಿರುವಾಗ  ಸಂಜೆ 07:15 ಗಂಟೆಗೆ ವರಂಗ ಗ್ರಾಮದ ಮುನಿಯಾಲು ಹೈಸ್ಕೂಲ್ ಹತ್ತಿರ ತಲುಪುವಾಗ ಅವರ ಎದುರುಗಡೆಯಿಂದ  ಮುಟ್ಲುಪಾಡಿ ಕಡೆಯಿಂದ ಮುನಿಯಾಲು ಕಡೆಗೆ KA-20-Y-7118 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಪ್ರಶಾಂತ ರವರು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಢಿಕ್ಕಿ ಪಡಿಸಿದ ಪರಿಣಾಮ ಶ್ವೇತಾ(25) ರವರಿಗೆ  ಬಲಮೊಣಕಾಲಿನ ಬಳಿ ಮೂಳೆ ಮುರಿತವಾಗಿದ್ದು ಬಲಕಾಲಿನ ಪಾದದ ಬಳಿ ತರಚಿದ ಗಾಯವಾಗಿರುತ್ತದೆ. ಸ್ಮಯನ್ (2) ರವರಿಗೆ ಬಲಮೊಣಕಾಲಿನ ಕೆಳಗೆ ಮೂಳೆ ಮುರಿತವಾಗಿದ್ದು ಎಡಬದಿಯ ಹಣೆಯಲ್ಲಿ ತರಚಿದ ಗಾಯವಾಗಿರುತ್ತದೆ ಹಾಗೂ ಪಿರ್ಯಾದಿದಾರರಿಗೆ  ಸಣ್ಣಪುಟ್ಟ ಗುದ್ದಿದ ನೋವುಗಳಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2020 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 


ಜಾಹೀರಾತು
https://www.timesofkarkala.in/2020/10/blog-post_8.html
Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget